ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನ ಪ್ರಮಾಣ ಶೇ.70.60

ಹೈದರಾಬಾದ್: 119 ಸ್ಥಾನಗಳಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ನಡೆದ ಮತದಾನದಲ್ಲಿ ಅಂತಿಮವಾಗಿ ಶೇಕಡಾ 70.60ರಷ್ಟು ಮತದಾನವಾಗಿದೆ. 2014ರ ತೆಲಂಗಾಣ ವಿಧಾನಸಭೆ ಚುನಾಣೆಯಲ್ಲಿ 69% ಮತ್ತು 2018ರಲ್ಲಿ 73% ಮತದಾನವಾಗಿತ್ತು. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಗುರುವಾರ ಮತದಾವು ಶಾಂತಿಯುತವಾಗಿ ಜರುಗಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಗುರುವಾರ ನಡೆದ ಬಹುತೇಕ ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಭವಿಷ್ಯ ನುಡಿದಿವೆ. ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ನೇತೃತ್ವದ ಆಡಳಿತಾರೂಢ ಬಿಆರ್‌ಎಸ್ ಪಕ್ಷ ರಾಜ್ಯದಲ್ಲಿ ಸತತ ಮೂರನೇ … Continue reading ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನ ಪ್ರಮಾಣ ಶೇ.70.60