More

    ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನ ಪ್ರಮಾಣ ಶೇ.70.60

    ಹೈದರಾಬಾದ್: 119 ಸ್ಥಾನಗಳಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ನಡೆದ ಮತದಾನದಲ್ಲಿ ಅಂತಿಮವಾಗಿ ಶೇಕಡಾ 70.60ರಷ್ಟು ಮತದಾನವಾಗಿದೆ. 2014ರ ತೆಲಂಗಾಣ ವಿಧಾನಸಭೆ ಚುನಾಣೆಯಲ್ಲಿ 69% ಮತ್ತು 2018ರಲ್ಲಿ 73% ಮತದಾನವಾಗಿತ್ತು.

    ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಗುರುವಾರ ಮತದಾವು ಶಾಂತಿಯುತವಾಗಿ ಜರುಗಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಗುರುವಾರ ನಡೆದ ಬಹುತೇಕ ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಭವಿಷ್ಯ ನುಡಿದಿವೆ.

    ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ನೇತೃತ್ವದ ಆಡಳಿತಾರೂಢ ಬಿಆರ್‌ಎಸ್ ಪಕ್ಷ ರಾಜ್ಯದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಆದರೆ, ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ.

    ರಾಜ್ಯದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಉನ್ನತ ನಾಯಕರು ಬಿಜೆಪಿ ಪರವಾಗಿ ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ನಡೆಸಿದ್ದರು.

    2018 ರ ತೆಲಂಗಾಣ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿ 88 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 19 ಸ್ಥಾನಗಳನ್ನು ಮತ್ತು ತೆಲುಗು ದೇಶಂ ಪಕ್ಷ 2 ಸ್ಥಾನಗಳಲ್ಲಿ ಜಯ ಗಳಿಸಿದ್ದವು. ಬಿಜೆಪಿ 1 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 7 ಸ್ಥಾನಗಳಲ್ಲಿ ಜಯಶಾಲಿಯಾಗಿದ್ದರೆ, ಪಕ್ಷೇತರರು ಒಂದು ಸ್ಥಾನ ಗೆದ್ದಿದ್ದರು.

    ಏನಿದು ಪಕಡವಾ ವಿವಾಹ?: ಗನ್​ ಪಾಯಿಂಟ್​ನಲ್ಲಿ ಶಿಕ್ಷಕನಿಗೆ ಬಲವಂತದ ಮದುವೆ

    ಭಾರತದ ಜನಸಂಖ್ಯೆ ಜಾಸ್ತಿ ಇದ್ದರೂ ಮಾಲಿನ್ಯ ಕಡಿಮೆ; ಪ್ರಧಾನಿ ಮೋದಿ ಪ್ರತಿಪಾದನೆ

    ಬಟ್ಟೆ ಮೂಸಿದ ಲಿಯೋ… ಕೆಲ ಕ್ಷಣಗಳಲ್ಲಿಯೇ ಅಪಹೃತ ಬಾಲಕ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts