More

  SBI ಬ್ಯಾಂಕ್​ಗೆ ಗೂಳಿ ಎಂಟ್ರಿ; ಹಣ ಇಡೋಕೆ ಬಂದಿದ್ಯಾ? ಅಂದ್ರು ನೆಟ್ಟಿಗರು

  ಉತ್ತರಪ್ರದೇಶ: ಉತ್ತರ ಪ್ರದೇಶದ ಉನ್ನಾವೊದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಹಗಂಜ್ ಶಾಖೆಗೆ ದಾರಿ ತಪ್ಪಿದ ಗೂಳಿಯೊಂದು ಬ್ಯಾಂಕ್​ ಒಳಗೆ ಬಂದಿದೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

  ಸದರ್ ಬಜಾರ್ ಪ್ರದೇಶದಲ್ಲಿರುವ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿ ಮತ್ತು ಗ್ರಾಹಕರಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

  ವಿಡಿಯೋದಲ್ಲಿ ಏನಿದೆ?: ಉತ್ತರ ಪ್ರದೇಶದ ಉನ್ನಾವೊದ ಶಾಹಗಂಜ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಅಡ್ಡಾದಿಡ್ಡಿ ಗೂಳಿಯೊಂದು ನುಗ್ಗಿದೆ. ಗೂಳಿ ನುಗ್ಗಿದ್ದರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಬೆಚ್ಚಿಬಿದ್ದರು. 30 ಸೆಕೆಂಡ್ ಗಳ ಕಾಲ ಸೆರೆ ಹಿಡಿದಿರುವ ವಿಡಿಯೋದಲ್ಲಿ ಬ್ಯಾಂಕ್ ಗೆ ನುಗ್ಗಿದ ಗೂಳಿ ಮೂಲೆಯಲ್ಲಿ ನಿಂತಿದೆ. ನಂತರ ಕೌಂಟರ್ ಹಿಂದೆ ನಡೆಯುತ್ತದೆ. ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಭದ್ರತಾ ಸಿಬ್ಬಂದಿ ಅದನ್ನು ದೊಣ್ಣೆಯಿಂದ ಓಡಿಸಲು ಪ್ರಯತ್ನಿಸಿದ್ದಾರೆ.

  ಮೊದಲು ಎರಡು ಹೋರಿಗಳು ಹೊಡೆದಾಡಿದವು. ಮತ್ತೊಂದು ಗೂಳಿಯನ್ನು ಓಡಿಸಿದಾಗ ಬಾಗಿಲು ತೆರೆದು ಗೂಳಿ ಒಳಗೆ ಬಂದಿತ್ತು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ಬ್ಯಾಂಕಿನಲ್ಲಿ ಯಾರಿಗೂ ತೊಂದರೆಯಾಗಲಿಲ್ಲ. ಇದನ್ನು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಗೌರವ್ ಸಿಂಗ್ ಬಹಿರಂಗಪಡಿಸಿದ್ದಾರೆ.

  ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗ್ತಿದ್ಯಾ? ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ…

  ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

  ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts