More

    VIDEO| ಮರಿ ಆನೆ ಸಫಾರಿ ವಾಹನದಲ್ಲಿರುವವರನ್ನು ಹೇಗೆ ಬೆದರಿಸುತ್ತದೆ ನೋಡಿ !

    ಆನೆಗಳ ಗುಂಪಿನಲ್ಲಿ ಇದ್ದ ಮರಿ ಆನೆ ಬ್ಯಾಟರಿ ಚಾಲಿತ ವಾಹನದ ಮುಂದೆ ಬಂದು ಬೆದರಿಸಿ ನಂತರ ಓಡಿ ಗುಂಪು ಸೇರಿಕೊಳ್ಳುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.

    ಮರಿ ಆನೆಯ ಈ ದೃಶ್ಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಅಪ್​ಲೋಡ್​ ಆದ ಕೆಲವು ತಾಸುಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಆಫ್ರಿಕಾದ ಕಾಡುಗಳಲ್ಲಿ ಆನೆಗಳ ಹಿಂಡು ಸಂಚರಿಸುತ್ತಿರುತ್ತದೆ. ಸಫಾರಿ ವಾಹನ ತೆರಳುವ ದಾರಿಯಲ್ಲಿ ಆನೆಗಳು ಇರುತ್ತವೆ. ಗುಂಪಿನಲ್ಲಿ ಮರಿ ಆನೆ ಕೂಡ ಇರುತ್ತದೆ. ಇದು ಕುಣಿದು ಕುಪ್ಪಳಿಸುತ್ತಿರುತ್ತದೆ.

    ಇದನ್ನೂ ಓದಿ   VIDEO| ಕರೊನಾ ವೈರಸ್​ ಹಾವಳಿಯಿಂದ ರಕ್ಷಣೆ ಪಡೆಯುವ ಸಂದೇಶ ಹೊತ್ತ ಸ್ಯಾಂಡ್​ ವೈಪರ್​ ದೃಶ್ಯ ವೈರಲ್​

    ನಂತರ ಮುಂದೆ ಓಡಿ ಬರುತ್ತದೆ. ಆಗ ಅಲ್ಲಿ ಬ್ಯಾಟರಿ ಚಾಲಿತ ಸಫಾರಿ ವಾಹನ ನಿಂತಿರುತ್ತದೆ. ವಾಹನವನ್ನು ನೋಡಿದ ಮರಿ ಆನೆ ಎರಡು ಕಾಲನ್ನು ಎತ್ತಿ ವಾಹನದಲ್ಲಿದ್ದವರನ್ನು ಬೆದರಿಸುತ್ತದೆ. ಕೆಲ ಕ್ಷಣಗಳ ನಂತರ ಮತ್ತೆ ಓಡಿ ಬಂದು ಆನೆಗಳ ಗುಂಪನ್ನು ಸೇರಿಕೊಳ್ಳುತ್ತದೆ.

    ಈ ವಿಡಿಯೋ ನೋಡಿದರೆ ತುಂಬ ಖುಷಿ ನೀಡುತ್ತದೆ. ಹೀಗಾಗಿ ನೆಟ್ಟಿಗರು ಮರಿ ಆನೆಯ ಆಟಕ್ಕೆ ಬೋಲ್ಡ್​ ಆಗಿದ್ದಾರೆ.

    ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ತುಣುಕನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಫ್​ಎಸ್​) ಸುಸಂತಾ ನಂದಾ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

    ಹೀಗೆ ಮಾಡಿದ್ದಕ್ಕೇನಾ ಕರೊನಾವನ್ನು ಕಟ್ಟಿ ಹಾಕಿದ್ದು ಚೀನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts