

ಕರೊನಾ ವೈರಸ್ ಹಾವಳಿ ಸಂದರ್ಭಕ್ಕೆ ಪರಿಣಾಮ ಬೀರುವ ಮರಳು ಹಾವು (ಸ್ಯಾಂಡ್ ವೈಪರ್) ವಿಡಿಯೋ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವು ಮರಳಿನಲ್ಲಿ ಅಡಗಿಕೊಳ್ಳುವ ಈ ವಿಡಿಯೋವನ್ನು ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇರಿ ಎಂಬ ಸಂದೇಶವನ್ನು ಈ ವಿಡಿಯೋ ಹೇಳುತ್ತದೆ. ಹೀಗಾಗಿ ಹೆಚ್ಚು ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಎಸ್) ಪರ್ವೀನ್ ಕಸ್ವಾನ್ ಅವರು ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಸ್ಯಾಂಡ್ ವೈಪರ್ ಬೇಟೆಯಾಡಲು ಹೊಂಚು ಹಾಕಿ ಮರಳಿನಲ್ಲಿ ಅಡಗಿಕೊಳ್ಳುತ್ತದೆ. ಮನೆಯಲ್ಲೇ ನೀವು ಕೂಡ ಈ ರೀತಿ ಇರಿ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಮರಳು ಹಾವು ಸ್ಪಲ್ಪ ದೂರ ಚಲಿಸುತ್ತದೆ. ನಂತರ ದಿಢೀರ್ ಅಡಗಿಕೊಳ್ಳುತ್ತದೆ. ಮರಳಿನಲ್ಲಿ ಹುದುಗಿ ಅದು ಚಲಿಸುತ್ತಿರುತ್ತದೆ.
ಕೆಲವು ವರ್ಷಗಳ ಹಿಂದೆ ವಜ್ಯಜೀವಿ ಛಾಯಾಗ್ರಾಹಕ ಜೇವಿಯರ್ ಅಜ್ನರ್ ಅವರು ಇದನ್ನು ಚಿತ್ರೀಕರಿಸಿದ್ದರು. ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಈ ವಿಡಿಯೋ ಈಗ ಮುನ್ನೆಲೆಗೆ ಬಂದಿದೆ. (ಏಜೆನ್ಸೀಸ್)