VIDEO| ಮೋದಿ ಹೆಸರಿಗೆ ವಿಶಿಷ್ಟ ರಾಗ ಹೆಣೆದ 'ವಿಸಲಿಂಗ್​ ವಿಲೇಜ್​'!

meghalaya
Published on

ಶಿಲ್ಲಾಂಗ್​: 'ವಿಸಲಿಂಗ್​ ವಿಲೇಜ್​' ಎಂಬ ಹೆಸರು ಗಳಿಸಿರುವ ಮೇಘಾಲಯದ ಕಾಂಗ್​ಥಾಂಗ್​ ಗ್ರಾಮದಲ್ಲಿ ಪ್ರತಿಯೊಬ್ಬರ ಹೆಸರನ್ನು ಒಂದು ವಿಶಿಷ್ಟ ಸಂಗೀತದ ಟ್ಯೂನಿನಿಂದಲೇ ಗುರುತಿಸಲಾಗುತ್ತದೆ. ಈ ಹಳ್ಳಿಯ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಸೂಚಕವಾಗಿ ವಿಶೇಷವಾದ ಟ್ಯೂನ್​ ಒಂದನ್ನು ರಚಿಸಿದ್ದಾರೆ.

ಈ ಅಪೂರ್ವವಾದ ಉಡುಗೊರೆಯನ್ನು ಸಿಎಂ ಕಾನರಾಡ್​ ಸಂಗ್ಮಾ ಅವರು ಟ್ವಿಟರ್​ ಮೂಲಕ ಪ್ರಧಾನಿ ಮೋದಿಗೆ ತಲುಪಿಸಿದ್ದಾರೆ. ಈ ಬಗೆಗಿನ ವಿಡಿಯೋ ತುಣುಕಿನಲ್ಲಿ, ಕಾಂಗ್​ಥಾಂಗ್​ ಗ್ರಾಮವನ್ನು ಪ್ರಮುಖ ಪ್ರವಾಸೀ ತಾಣವಾಗಿ ಬೆಳೆಸುವಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ ಎಂದಿದ್ದಾರೆ. ಸಿಎಂ ಸಂಗ್ಮಾರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಮೋದಿ, ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net