Fish Truck Accident; ಚಾಲಕ ನರಳಾಡುತ್ತಿದ್ದರು ಮಾನವೀಯತೆ ಮರೆತು ಮೀನಿಗಾಗಿ ಮುಗಿಬಿದ್ದ ಜನ

Fish Truck Accident
Published on

ಹೈದರಾಬಾದ್​: ನಿಯಂತ್ರಣ ತಪ್ಪಿ ಮೀನು ಸಾಗಿಸುತ್ತಿದ್ದ ಪಿಕಪ್​​​ ವಾಹನವೊಂದು ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಸಹಾಯಕ ಗಂಭೀರವಾಗಿ ಗಾಯಗೊಂಡಿದ್ದು, ಜನರು ಅದನ್ನು ಗಮನಿಸದೆ ರಸ್ತೆಯಲ್ಲಿ ಬಿದ್ದಿದ್ದ ಮೀನುಗಳಿಗಾಗಿ  ಮುಗಿಬಿದ್ದಿರುವ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ನಡೆದಿದೆ.

ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಖಮ್ಮಂನಿಂದ ವಾರಂಗಲ್‌ಗೆ ಪಿಕಪ್​ ವಾಹನದಲ್ಲಿ ಮೀನನ್ನು ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಖಮ್ಮಂನಿಂದ ವಾರಂಗಲ್‌ಗೆ ಮೀನಿನ ಲೋಡ್​ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ಸಹಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದು, ಗಾಡಿಯನ್ನು ಸ್ಥಳದಿಂದ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಪಘಾತದ ನಂತರ ಪಿಕಪ್​ ವಾಹನದಲ್ಲಿದ್ದ ಮೀನುಗಳ ರಸ್ತೆಯಲ್ಲಿ ಹಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಚಾಲಕ ಸತ್ತು ಬಿದ್ದಿದ್ದರೂ ಅದನ್ನು ನೋಡದೆ ಮೀನಿಗಾಗಿ ಮುಗಿಬಿದದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಮೊದಲು ಜನರ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net