

ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾದ್ದು ಕಡ್ಡಾಯ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ ನಡವಳಿಕೆ. ಆದರೆ, ಇನ್ನೂ ಅನೇಕರು ಇದನ್ನು ಮೀರಿ ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದಾರೆ. ಅವರಿಗೊಂದು ಪಾಠ ಈ ವಿಡಿಯೋದಲ್ಲಿದೆ.
ಐಪಿಎಸ್ ಅಧಿಕಾರಿ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಒಂದು ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದ್ದು, "Creativity at its peak with #COVID19 around! Now you decide; who are you?" ಎಂಬ ಸ್ಟೇಟಸ್ ಕೂಡ ಹಾಕಿದ್ದಾರೆ.
ಹಿಂದಿ ಭಾಷೆಯಲ್ಲಿರುವ ವಿಡಿಯೋ ರಿಯಾಲಿಟಿ ಚೆಕ್ಗೆ ಸಂಬಂಧಿಸಿದ್ದಾಗಿದ್ದು, ರಾತ್ರಿ ಹೊತ್ತು ಲೋಗೋ ಮೈಕ್ ಹಿಡಿದುಕೊಂಡಿರುವ ಪತ್ರಕರ್ತ ಮಾಸ್ಕ್ ಧರಿಸದ ವ್ಯಕ್ತಿ ಮತ್ತು ಕತ್ತೆಯ ಬಳಿ ಹೋಗಿ ನಡೆಸಿದ ಸಂಭಾಷಣೆಯ ದೃಶ್ಯವಿದೆ. ವಿಡಿಯೋ ಆರಂಭವಾಗುವುದೇ ಪತ್ರಕರ್ತ ಕತ್ತೆಯ ಬಾಯಿಗೆ ಮೈಕ್ ಹಿಡಿದು ಪ್ರಶ್ನೆ ಕೇಳುವ ಮೂಲಕ
ಪತ್ರಕರ್ತ: ಏನೂ ಕೇಳಿದ್ರೂ ಉತ್ತರ ಕೊಡುವುದಿಲ್ಲ ಅಣ್ಣಾ.. ಮಾಸ್ಕ್ ಧರಿಸದೇ ರಸ್ತೆ ಮೇಲೆ ಯಾಕೆ ಕುಳಿತಿದ್ದೀಯಾ ಅಣ್ಣಾ..
ಕತ್ತೆ: -----
ಪತ್ರಕರ್ತ: ಈಗ ಲಾಕ್ಡೌನ್ ಇದೆ. ಆದರೂ ನೀವು ಹೊರಗೆ ಅಡ್ಡಾಡ್ತಿದ್ದೀರಲ್ಲ.. ಸ್ಯಾನಿಟೈಸ್ ಎಲ್ಲ ಮಾಡ್ತಿದ್ದೀರಲ್ಲ..
ಕತ್ತೆ:--------
ದೃಶ್ಯ ಬದಲಾಗುತ್ತದೆ.
ಪತ್ರಕರ್ತ ಎದ್ದು ಅಲ್ಲೇ ಇದ್ದ ಇಬ್ಬರ ಪೈಕಿ ಒಬ್ಬಾತ ಮಾಸ್ಕ್ ಧರಿಸಿರಲಿಲ್ಲ. ಆತನ ಬಳಿ ಹೋಗಿ ಮಾತನಾಡುವ ದೃಶ್ಯ
ಪತ್ರಕರ್ತ: ಅಲ್ನೋಡಿ ನಮ್ಮ ಅಣ್ಣ ಕುಳಿತಿದ್ದಾನೆ ನೋಡಿ ಅಲ್ಲಿ.. ಸ್ವಲ್ಪ ಮುಂದೆ ನೋಡಿ ಅಲ್ಲೇ ಇದ್ದಾನೆ. ಸ್ವಲ್ಪ ಸೈಡ್ನಲ್ಲಿ ನಿಲ್ಲಣ್ಣ.. ಇವರು ಅಣ್ಣನ್ನನ್ನು ನೋಡಿಬಿಡಲಿ ಒಮ್ಮೆ... ಅಲ್ಲಿ ಸೈಡ್ನಲ್ಲಿ ಇದೆಯಲ್ಲ. ಅದು ಏನೂ ಮಾತನಾಡುವುದಿಲ್ಲ.. ಪ್ರಶ್ನೆ ಕೇಳಿದ್ರೆ ಮಾತೇ ಆಡಲ್ಲ.. ಯಾಕೆ ಹಾಗೆ...?
ಮಾಸ್ಕ್ ಧರಿಸದ ವ್ಯಕ್ತಿ: ಯೇ.. ಅದೇನೂ ಮಾತನಾಡುವಂತಹ ಗಿರಾಕಿ ಅಲ್ಲ ಬಿಡಣ್ಣ..
ಪತ್ರಕರ್ತ: ಅದು ಮಾತನಾಡುವಂಥದ್ದಲ್ಲ.. ಹಾಗಾದ್ರೆ ಅದೇನದು...
ಮಾಸ್ಕ್ ಧರಿಸದ ವ್ಯಕ್ತಿ: ಏನು.. ಅಲ್ಲೇ ಎದುರಿಗೇ ಇದೆಯಲ್ಲ ನೋಡಿ...
ಪತ್ರಕರ್ತ: ಹಾಗಾದ್ರೆ ಅದರ ಹೆಸರೇನು?
ಮಾಸ್ಕ್ ಧರಿಸದ ವ್ಯಕ್ತಿ: ಅದನ್ನು ಕತ್ತೆ ಅಂತ ಕರೀತಾರೆ...
ಪತ್ರಕರ್ತ: ಕತ್ತೆ ಅಂತಾರಾ... ಓ ಅಣ್ಣಾ.. ಹಾಗಾದ್ರೆ ಲಾಕ್ಡೌನ್ ಟೈಮ್ನಲ್ಲಿ ಮಾಸ್ಕ್ ಧರಿಸದೇ ಇರುವುದು ಹೊರಗೆಲ್ಲ ಅಡ್ಡಾಡೋದು ಕತ್ತೇನಾ...
ಮಾಸ್ಕ್ ಧರಿಸದ ವ್ಯಕ್ತಿ: ಹಾಂ.. ಹೌದು...
ಪತ್ರಕರ್ತ: ಹಾಗಾದ್ರೆ ಮಾಸ್ಕ್ ಧರಿಸದೇ ಇರುವವರನ್ನು ಏನಂತಾರೆ?
ಮಾಸ್ಕ್ ಧರಿಸದ ವ್ಯಕ್ತಿ: ನಾನು ಈಗ ಎದ್ದು ಬಂದೆ. ಮಾಸ್ಕ್ ಮರೆತು ಬಂದೆ..
ಪತ್ರಕರ್ತ: ಅದೂ ಹಾಗೇ ಅಲ್ಲವೇ. ಈಗಷ್ಟೇ ಅಲ್ಲಿಂದ ಎದ್ದು ಹೋಯಿತು.. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರು ಕತ್ತೆ...
ಮಾಸ್ಕ್ ಧರಿಸದ ವ್ಯಕ್ತಿ: ಹೌದು.. ಮಾಸ್ಕ್ ಯಾರು ಧರಿಸುವುದಿಲ್ಲವೋ ಅವರು ಕತ್ತೆ... !