Viral Video| ಹೆಂಡ್ತಿ ಮುಂದೆಯೇ ಗರ್ಲ್​ಫ್ರೆಂಡ್​ನನ್ನು ತಬ್ಬಿ ಮುದ್ದಾಡಿದ ಪತಿ; ನೋಡುತ್ತ ಸುಮ್ಮನೆ ನಿಂತ ಪತ್ನಿ

Viral Video
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯಾಚೆಗಿನ ಸಂಬಂಧದ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಅನೇಕ ರೀತಿಯ ಅಹಿತಕರ ಘಟನೆಗಳು ನಡೆದುಹೋಗಿದೆ. ಆದರೆ, ಇಲ್ಲೊಂದು ಆಶ್ಚರ್ಯಕರ ಘಟನೆಯಲ್ಲಿ ವ್ಯಕ್ತಿಯೋರ್ವ ತನ್ನ ಮದುವೆ ವಾರ್ಷಿಕೋತ್ಸವವನ್ನು ಪತ್ನಿ ಹಾಗೂ ಪ್ರೇಯಸಿಯೊಟ್ಟಿಗೆ ಆಚರಿಸಿಕೊಂಡಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ವ್ಯಕ್ತಿಯ ಪತ್ನಿಯು ತಮ್ಮ ಮದುವೆ ವಾರ್ಷಿಕೋತ್ಸವದ ಆಚರಣೆಗೆ ತನ್ನ ಪತಿಯ ಗರ್ಲ್​ಫ್ರೆಂಡ್​ಅನ್ನು ಆಹ್ವಾನಿಸಿದ್ದು, ಘಟನೆಯು ರಾಜಸ್ಥಾನದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕಿದೆ. ಸದ್ಯ ಈ ವಿಡಿಯೋ ವೈರಲ್ (Viral Video) ಆಗಿದ್ದು, 143.4ಕೆ ವೀವ್ಸ್​ ಪಡೆದುಕೊಂಡಿದೆ.

ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ವ್ಯಕ್ತಿ ತನ್ನ ಪತ್ನಿ ಹಾಗೂ ಪ್ರಿಯತಮೆಯೊಂದಿಗೆ ನಿಂತಿದ್ದು, ಪ್ರಿಯತಮೆಯು ಶಾಕ್​ನಲ್ಲಿ ಇರುವುದನ್ನು ನೋಡಬಹುದಾಗಿದೆ. ಬಳಿಕ ಆಕೆಯನ್ನು ಪ್ರಿಯಕರ ಹಾಗೂ ಆತನ ಪತ್ನಿ ಸಂತೈಸುತ್ತಿದ್ದು, ತಬ್ಬಿಕೊಂಡು ಬಳಿಕ ಆತ ರೋಸ್ ನೀಡಿ ಎಲ್ಲರ ಮುಂದೆ ಪ್ರಪೋಸ್ ಮಾಡುತ್ತಾನೆ. ಈ ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್​ ಹಾಕುತ್ತಿದ್ದು, ಅನೇಕರು ಆಕೆ ಪ್ರೇಯಸಿಯಲ್ಲ ಎಂದು ಹೇಳಿದ್ದಾರೆ.

ಕೆಲವರು ಆಕೆ ಆ ವ್ಯಕ್ತಿಯ ತಂಗಿಯಾಗಿದ್ದು, ಕೋವಿಡ್​ನಲ್ಲಿ ಪತಿಯನ್ನು ಕಳೆದುಕೊಂಡಿದ್ದಾಳೆ. ಆಕೆಯನ್ನು ಸಂತೈಸುವ ನಿಟ್ಟಿನಲ್ಲಿ ಪತಿ-ಪತ್ನಿ ಈ ರೀತಿ ಮಾಡಿದ್ದು, ಕಿಡಿಗೇಡಿಗಳು ಸಂಬಂಧವನ್ನು ತಿರುಚಿ ವಿಡಿಯೋ ಹಾಕಿದ್ದಾರೆ. ವೀವ್ಸ್ ಬರಲೆಂದು ಈ ರೀತಿ ಮಾಡುವುದು ಸರಿಯಲ್ಲ ಎಂದು ಕಮೆಂಟ್ ಹಾಕಿ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net