VIDEO| ಶಿವಣ್ಣನನ್ನು ತಬ್ಬಿ ಕಣ್ಣೀರಿಟ್ಟ ತೆಲುಗು ಸ್ಟಾರ್​ ಚಿರಂಜೀವಿ... ದುಃಖದಿಂದ ನೀರಾದ ಶಿವಣ್ಣ

1184198
Published on

ಬೆಂಗಳೂರು: ಲೌಕಿಕ ಯಾತ್ರೆಗೆ ವಿದಾಯ ಹೇಳಿದ ಕನ್ನಡ ಚಿತ್ರರಂಗದ 'ಯುವರತ್ನ' ಪುನೀತ್​ ರಾಜ್​ಕುಮಾರ್​ರ ಅಂತಿಮ ದರ್ಶನ ಪಡೆಯಲು ತೆಲುಗು ಚಿತ್ರರಂಗದ ಹಲವು ಪ್ರಮುಖ ನಟರು ಇಂದು ನಗರಕ್ಕೆ ಆಗಮಿಸಿದ್ದರು. ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿದ ಮೇರುನಟ ಚಿರಂಜೀವಿ, ಶಿವರಾಜ್​ಕುಮಾರ್​ರನ್ನು ನೋಡಿದ ಕೂಡಲೇ ಬಿಗಿದಪ್ಪಿ ಕಣ್ಣೀರಿಟ್ಟರು.

ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಚಿರಂಜೀವಿ, ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್​ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಕೆಲ ದಿನಗಳ ಹಿಂದೆ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್​ ರಾಜ್​ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಸ್ಥಾನ ಸಿಗಬೇಕು, ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರು.

"ನಾವೊಂದು ಬಯಸಿದರೆ ವಿಧಿ ಮತ್ತೊಂದು ಬಗೆಯುತ್ತದೆ. ದೇವರು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಲಿ ಎಂದು ಕೇಳಿಕೊಳ್ತೇನೆ. ಯಾವುದೇ ಕಾರ್ಯಕ್ರಮಕ್ಕೆ ಮೂವರೂ ನಮ್ಮ ಮನೆಗೆ ಬಂದು ಆಹ್ವಾನಿಸುತ್ತಿದ್ದರು. ನಮ್ಮಲ್ಲಿ ಕಾರ್ಯಕ್ರಮವಿದ್ದರೂ ನಾವು ಅವರನ್ನು ಕರೆಯುತ್ತಿದ್ದೆವು. ಪುನೀತ್ ಮೃತಪಟ್ಟಿರುವುದು ಭಾರೀ ಅನ್ಯಾಯ. ತುಂಬಾ ನೋವಾಗುತ್ತಿದೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net