VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!

top
Published on

ಕೊಯಂಬತೂರ್ : ಚುನಾವಣಾ ಪ್ರಚಾರದಲ್ಲಿ ಹೊಸ ಹೊಸ ತಂತ್ರಗಳನ್ನು ಉಪಯೋಗಿಸುವುದರಲ್ಲಿ ತಮಿಳುನಾಡು ಎತ್ತಿದ ಕೈ. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಇತ್ತೀಚೆಗಷ್ಟೇ ಅಭ್ಯರ್ಥಿಗಳು ರಸ್ತೆ ಬದಿ ಹೊಟೆಲ್​ಗಳಲ್ಲಿ ದೋಸೆ ಹಾಕಿ ಜನರ ಗಮನ ಸೆಳೆದಿದ್ದರು. ಇದೀಗ ಕಲಾವಿದನೊಬ್ಬ ಬುಗುರಿಗಳನ್ನು ಆಡಿಸಿ ಎಐಎಡಿಎಂಕೆ ಪರ ಪ್ರಚಾರ ಮಾಡಿದ್ದಾನೆ.

ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿದ್ದು, ಏಪ್ರಿಲ್ 6 ರಂದು ಮೊದಲ ಹಂತದ ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಿನ್ನೆ ಕೊಯಂಬತೂರ್​ನಲ್ಲಿ, ಮಿನಿಯೇಚರ್ ಆರ್ಟಿಸ್ಟ್ ಆದ ರಾಜಾ ಎಂಬುವರು, 7 ನಿಮಿಷಗಳಲ್ಲಿ 234 ಬುಗುರಿಗಳನ್ನು ಎರಡು ಬೆರಳುಗಳನ್ನು ಮಾತ್ರ ಬಳಸಿ ತಿರುಗಿಸಿದ್ದಾರೆ. ಈ ಮರದ ಬುಗುರಿಗಳಿಗೆ ಎಐಎಡಿಎಂಕೆ ಬಾವುಟದ ರೀತಿ ಬಣ್ಣ ಹಚ್ಚಿರುವುದು ವಿಶೇಷ.

"ಎಐಎಡಿಎಂಕೆಯ ಎರಡು ಎಲೆಗಳ ಚಿಹ್ನೆಯನ್ನು ಮತ್ತು ವಿಕ್ಟರಿ ಚಿಹ್ನೆಯನ್ನು ಬಿಂಬಿಸಲು ನಾನು ಎರಡು ಬೆರಳುಗಳಿಂದ ಬುಗುರಿಗಳನ್ನು ತಿರುಗಿಸಿದ್ದೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ಬುಗುರಿಗಳಂತೆ ಕೆಲಸ ಮಾಡಿ ಪಕ್ಷವನ್ನು ತಮಿಳುನಾಡು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೋರುತ್ತೇನೆ " ಎಂದು ರಾಜಾ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net