More

    VIDEO| ಜೀತೇಗಾ.. ಇಂಡಿಯಾ ಜೀತೇಗಾ! ’83’ ಟ್ರೇಲರ್​ ಬಿಡುಗಡೆ​​

    ನವದೆಹಲಿ: 1983ರಲ್ಲಿ ಭಾರತ ಕ್ರಿಕೆಟ್​ ತಂಡ ಮೊದಲ ಬಾರಿಗೆ ವರ್ಲ್ಡ್​​ ಕಪ್​ ಗೆದ್ದು ಇತಿಹಾಸ ರಚಿಸಿದ ಕ್ಷಣಗಳನ್ನು, ಅದರ ಸುತ್ತಲ ಕಥೆಯನ್ನು ಹೆಣೆದಿರುವ ಚಿತ್ರ ’83’. ಕಬೀರ್​ ಖಾನ್​ ನಿರ್ದೇಶನದ ಈ ಐಕಾನಿಕ್​ ಸಿನಿಮಾದ ಟ್ರೇಲರ್​ ಮಂಗಳವಾರ ಬಿಡುಗಡೆಯಾಗಿದೆ. ರಿಲೆಯನ್ಸ್​ ಎಂಟರ್​ಟೈನ್​ಮೆಂಟ್​ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿರುವ ಟ್ರೇಲರ್​ಗೆ ಅದಾಗಲೇ 5 ಕೋಟಿಗೂ ಹೆಚ್ಚು ವೀಕ್ಷಣೆಗಳು ಲಭಿಸಿವೆ.

    ಬಾಲಿವುಡ್​ ನಟ ರಣವೀರ್​ ಸಿಂಗ್​ ಭಾರತದ ಆಗಿನ ಕ್ಯಾಪ್ಟನ್​ ಕಪಿಲ್​ ದೇವ್​ರ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರ, ಡಿಸೆಂಬರ್​ 24 ರಂದು ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್​​ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಯ ಮಹಾಪೂರ ಹರಿದುಬಂದಿದ್ದು, ರಣವೀರ್​​ ಸಿಂಗ್​ರ ಹೊಸ ಲುಕ್​​ ಮತ್ತು ನಟನೆಯ ಶೈಲಿ ಅಭಿಮಾನಿಗಳನ್ನು ಚಕಿತಗೊಳಿಸಿದೆ.

    ಇದನ್ನೂ ಓದಿ: ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಇಂದು ಭಾರತ-ಬೆಲ್ಜಿಯಂ ಕ್ವಾರ್ಟರ್‌ಫೈನಲ್

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪೇಕ್ಷಿತ ತಂಡವಾಗಿದ್ದ ಭಾರತ ಕ್ರಿಕೆಟ್​ ತಂಡ 1983ರ ವರ್ಲ್ಡ್​ ಕಪ್​ ಸಾಧಿಸಲು ಪಟ್ಟ ಶ್ರಮ ಹೇಗಿತ್ತು ಎಂಬುದನ್ನು ವಿಸ್ತೃತವಾಗಿ ಚಿತ್ರಿಸಿದ್ದು, ಕ್ರೀಡಾಪ್ರೇಮಿಗಳಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಹತ್ತಿಸಲಿದೆ. ಟ್ರೇಲರ್​ನಲ್ಲಿ “ಜೀತೇಗಾ ಜೀತೇಗಾ ಇಂಡಿಯಾ ಜೀತೇಗಾ…” ಎಂಬ ರೋಮಾಂಚಕ ಹಾಡಿನೊಂದಿಗೆ, ಕ್ಯಾಪ್ಟನ್​ ಕಪಿಲ್​ದೇವ್​ “ವಿ ಹಿಯರ್​ ಟು ವಿನ್​” ಎಂದು ದೃಢವಾಗಿ ಹೇಳುವ ದೃಶ್ಯ ಸಿನಿಪ್ರಿಯರಲ್ಲಿ ತವಕ ಹೆಚ್ಚಿಸುವಂತಿದೆ.

    ಚಿತ್ರದಲ್ಲಿ ಕಲಾವಿದರಾದ ತಾಹಿರ್​ ಭಾಸಿನ್​, ಪಂಕಜ್​ ತ್ರಿಪಾಠಿ, ಸಾಖಿಬ್​ ಸಲೀಂ ಕ್ರಮವಾಗಿ ಸುನೀಲ್​ ಗವಾಸ್ಕರ್, ಪಿ.ಆರ್.ಮಾನ್​ ಸಿಂಗ್ ಮತ್ತು​ ​ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರ್ಲ್ಡ್​ ಕಪ್​ ಗೆದ್ದ ಇಡೀ ಭಾರತ ತಂಡವನ್ನು ತೆರೆಯ ಮೇಲೆ ಪುನರ್​ರಚಿಸಲಾಗಿದೆ. ರಣವೀರ್​ ಪತ್ನಿಯಾದ ನಟಿ ದೀಪಿಕಾ ಪಡುಕೋಣೆಯೇ ತೆರೆಯ ಮೇಲೆ ಕಪಿಲ್​ ದೇವ್​ ಪತ್ನಿ ರೋಮಿ ಪಾತ್ರ ನಿರ್ವಹಿಸಿದ್ದಾರೆ.

    ಮದುವೆ ಆರತಕ್ಷತೆಗೆ ಬರಲು ಬಂಧುಮಿತ್ರರಿಗೆ ‘ನೋಟೀಸ್​’! ವಕೀಲ ಜೋಡಿ ನೀಡಿದ ಆಮಂತ್ರಣಪತ್ರಿಕೆ ನೋಡಿ!

    ಮಹಿಳಾ ಸದಸ್ಯರೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೆಲ್ಫಿ! ಶೀರ್ಷಿಕೆ ನೋಡಿ ಸಿಟ್ಟಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts