More

  ರೀಲ್ಸ್​ ಮಾಡುವಾಗ 300ಅಡಿ ಕಂದಕಕ್ಕೆ ಉರುಳಿದ ಕಾರು; ಯುವತಿ ಮೃತ್ಯು, ವಿಡಿಯೋ ವೈರಲ್​

  ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯೂ ಮೊಬೈಲ್​ ಗೀಳಿಗೆ ಹೆಚ್ಚು ದಾಸರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಭರದಲ್ಲಿ ಇನ್ನಿಲ್ಲದ ಕೆಲಸಕ್ಕೆ ಕೈ ಹಾಕಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ರೀಲ್ಸ್​ ಮಾಡುವಾಗ 300 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

  ಘಟನೆಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಹನುಮಾನ್​ನಗರದಲ್ಲಿ ನಡೆದಿದ್ದು, ಮೃತರನ್ನು ಶ್ವೇತಾ ದೀಪಕ್​ ಸುರ್ವಾಸೆ (23) ಎಂದು ಗುರುತಿಸಲಾಗಿದೆ. ಇವರು ರೀಲ್ಸ್​ ಮಾಡುವಾಗ ಕಾರನ್ನು ರಿವರ್ಸ್​ ತೆಗೆಯುವಾಗ ಈ ದುರ್ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

  ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ ಅಭಿಮಾನಿ

  ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ರೀಲ್ಸ್​ ಮಾಡುವಾದ ಯುವತಿ ಕಾರನ್ನು ರಿವರ್ಸ್​ ತೆಗೆಯುತ್ತ ರೀಲ್ಸ್​ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಆಕೆಯ ಗೆಳೆಯ ಕಾರನ್ನು ನಿಧಾನವಾಗಿ ರಿವರ್ಸ್​ ತೆಗೆಯುವಂತೆ ಸೂಚಿಸುತ್ತಾನೆ. ಇದಕ್ಕೆ ಕೇರ್​ ಮಾಡದ ಆಕೆ ವೇಗವಾಗಿ ರಿವರ್ಸ್​ ತೆಗೆಯುತ್ತಾಳೆ. ಈ ವೇಳೆ ನಿಯಂತ್ರಣ ತಪ್ಪಿ ಕಾರು 300 ಅಡಿ ಆಳದ ಕಂದಕಕ್ಕೆ ಉರುಳುತ್ತದೆ.

  ಕಾರಿ ಕಂದಕಕ್ಕೆ ಉರುಳಿದ ರಭಸಕ್ಕೆ ಜಖಂಗೊಂಡಿದ್ದು, ಕಾರಿನೊಳಗಡೆ ಯುವತಿ ಕಾರು ಬಿದ್ದ ರಭಸಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡದ ಸದಸ್ಯರು ಕಂದಕಕ್ಕೆ ಉರುಳಿದ್ದ ಕಾರು ಹಾಗೂ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  See also  ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts