

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ಬಾಹುಬಲಿಯ ಕಟ್ಟಪ್ಪ ಪಾತ್ರದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ನಟ ಸತ್ಯರಾಜ್ ಅವರಿಗೆ ಮಾತೃ ವಿಯೋಗವಾಗಿದೆ.
ಸತ್ಯರಾಜ್ ಅವರ ತಾಯಿ ನಾಥಂಬಳ್ ಕಾಳಿಂಗರಾಯರ್ 94ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಇಹಲೋಕ ತ್ಯಹಿಸಿದ್ದಾರೆ. ಶುಕ್ರವಾರ 4 ಗಂಟೆಗೆ ಕೊಯಮತ್ತೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಥಂಬಾಳ್ ಅವರಿಗೆ ಕಲ್ಪನಾ ಮಂದ್ರಡಿಯರ್ ಮತ್ತು ರೂಪಾ ಸೇನಾಪತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿದ್ದ ಸತ್ಯರಾಜ್ ಸುದ್ದಿ ತಿಳಿದ ತಕ್ಷಣ ಅರ್ಧಕ್ಕೆ ಶೂಟಿಂಗ್ ನಿಲ್ಲಿಸಿ ಕೋವಿಗೆ ಧಾವಿಸಿದರು. ಚಿತ್ರರಂಗದ ಗಣ್ಯರು ಹಿರಿಯ ನಟನ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಸಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಸತ್ಯರಾಜ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟ ಸತ್ಯರಾಜ್, ನಂತರದಲ್ಲಿ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಪ್ರಸ್ತುತ ಸತ್ಯರಾಜ್ ಅವರು 'ವೆಪನ್' ಸಿನಿಮಾದಲ್ಲಿ ನಟ ವಸಂತ ರವಿ ಜತೆ ನಟಿಸುತ್ತಿದ್ದಾರೆ. ತೆಲುಗು ಮತ್ತು ಮಲಯಾಳಂನ ಸಾಕಷ್ಟು ಸಿನಿಮಾಗಳಲ್ಲಿಯೂ ಸತ್ಯರಾಜ್ ನಟಿಸಲಿದ್ದಾರೆ. (ಏಜೆನ್ಸೀಸ್)