ಕೆಮ್ಮಿಲ್ಲ, ಶೀತ ಇಲ್ಲ ಆದರೂ ಈ ಬಾಲಿವುಡ್​ ನಟನಿಗೆ ಕರೊನಾ ಪಾಸಿಟಿವ್​!

kiran-kumar-jpg_1200x900
Published on

ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮುಂಬೈ ಮಹಾನಗರದಲ್ಲಿ ಕರೊನಾ ಕೇಕೆ ಹಾಕುತ್ತಿದೆ. ಇತ್ತೀಚೆಗಷ್ಟೇ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಮನೆಯ ಕೆಲಸಗಾರರಲ್ಲಿ ಕರೊನಾ ಪಾಸಿಟಿವ್​ ವರದಿ ಬಂದಿತ್ತು. ಇದೀಗ ಬಾಲಿವುಡ್​ನ 74 ವರ್ಷದ ಹಿರಿಯ ನಟ ಕಿರಣ್​ ಕುಮಾರ್​ಗೆ ಕರೊನಾ ಕಾಣಿಸಿಕೊಂಡಿದೆ. ವಿಚಿತ್ರ ಏನೆಂದರೆ, ಕರೊನಾದ ಯಾವುದೇ ಲಕ್ಷಣಗಳೂ ಅವರಿಗಿಲ್ಲ!

ಹೌದು, ಎಂದಿನಂತೆ ಮೇ 14ರಂದು ಸಾಮಾನ್ಯ ಚೆಕಪ್​ಗೆಂದು ಆಸ್ಪತ್ರೆಗೆ ಕಿರಣ್​ ಕುಮಾರ್ ತೆರಳಿದ್ದಾರೆ. ಆಗ ಕೋವಿಡ್​ ಪರೀಕ್ಷೆ ಮಾಡಿದ ಮೇಲೆ ಗೊತ್ತಾಗಿದೆ ಅವರಿಗೆ ಕರೊನಾ ಪಾಸಿಟಿವ್​ ಇದೆ ಎಂದು. ಹಾಗಾಗಿ ನೇರವಾಗಿ ಮನೆಗೆ ಬಂದು ಸ್ವತಃ ಕ್ವಾರಂಟೈನ್​ ಆಗಿದ್ದಾರೆ.

ಕೆಮ್ಮಿಲ್ಲ, ನೆಗಡಿ ಇಲ್ಲ, ಕರೊನಾಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳಿಲ್ಲ. ಆದರೂ ಪಾಸಿಟಿವ್​ ಬಂದಿದೆ. ಹಾಗಾಗಿ ನಾನೇ ಹೌಸ್​ ಕ್ವಾರಂಟೈನ್​ ಆಗಿದ್ದೇನೆ. ಎರಡನೇ ಮಹಡಿಯಲ್ಲಿ ನನ್ನ ಕುಟುಂಬವಿದೆ. ಸದ್ಯ ನಾನು ಮೂರನೇ ಮಹಡಿಯಲ್ಲಿದ್ದೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ. ಇನ್ನೇನು ಮೇ. 26ಕ್ಕೆ ಮತ್ತೊಂದು ಬಾರಿ ಕರೊನಾ ಪರೀಕ್ಷೆ ಮಾಡಿಕೊಳ್ಳಲಿದ್ದೇನೆ’ ಎಂದು ಕಿರಣ್​ ತಿಳಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಧಡ್ಕನ್​, ಮುಜ್ಸೆ ದೋಸ್ತಿ ಕರೋಗಿ ಸೇರಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1960ರಲ್ಲಿ ತೆರೆಕಂಡ ಲವ್​ ಇನ್ ಶಿಮ್ಲಾ ಇವರ ಮೊದಲ ಸಿನಿಮಾ. ಇನ್ನು ಶನಿವಾರದ ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಈವರೆಗೂ ಒಟ್ಟು 47,190 ಕರೊನಾ ಪ್ರಕರಣಗಳು ದಾಖಲಾಗಿದ್ದು, 1577 ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net