ಹಿರಿಯ ನಟ ದೊಡ್ಡಣ್ಣ ಅನಾರೋಗ್ಯ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ

doddanna
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ನಡೆಯುತ್ತಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್​​ನೊಂದಿಗೆ ಮಾತನಾಡಿರುವ ಜಯದೇವ ಆಸ್ಪತ್ರೆಯ ಎಂಡಿ ಡಾ.ಮಂಜುನಾಥ್, "ದೊಡ್ಡಣ್ಣ ಅವರ ಹೃದಯಬಡಿತದಲ್ಲಿ ಏರುಪೇರಾಗುತ್ತಿತ್ತು. ಹೃದಯಬಡಿತ 70 ರಿಂದ 80ರ ಬದಲಾಗಿ 20-30ಕ್ಕೆ ಇಳಿದುಬಿಡುತ್ತಿತ್ತು. ಹೀಗಾಗಿ ಹೃದಯಕ್ಕೆ ಪೇಸ್ ಮೇಕರ್ ಅಳವಡಿಸಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸಿ, ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಮೂರು ದಿನ ದೊಡ್ಡಣ್ಣ ಅವರಿಗೆ ಚಿಕಿತ್ಸೆ ಮುಂದುವರೆಯಲಿದ್ದು, ಇದೇ ಭಾನುವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net