

ಬೆಳ್ತಂಗಡಿ: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನೂತನ ಫಲ್ಗುಣಿ ಕಟ್ಟಡ ಅ.25ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಟ್ಟಡ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಭದ್ರತಾ ಕೊಠಡಿ, ಶಾಸಕ ಹರೀಶ್ ಪೂಂಜ ಬ್ಯಾಂಕಿಂಗ್ ಕಚೇರಿ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಗೋದಾಮು ಕಟ್ಟಡ ಉದ್ಘಾಟಿಸುವರು. ವಿ.ಪ.ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷ ಹರೀಶ್ ಕುಮಾರ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಮಂಗಳೂರು ಕೆ.ಎಂ.ಎಂ ನಿರ್ದೇಶಕ ಪ್ರಭಾಕರ ಹುಲಿಮೇರು, ತಾಲೂಕು ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ವೇಣೂರು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜಯರಾಮ ಶೆಟ್ಟಿ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಎಡ್ವಿನ್ ಸಂತೋಷ್ ಮೋನಿಸ್, ವೇಣೂರು ಎಂಜೆಎಂ ಖತೀಬ ಸಯ್ಯಿದ್ ಮಹಮ್ಮದ್ ಶರುದ್ದೀನ್ ಅಹ್ಸನಿ ಅಲ್‌ಹಾದಿ ತಂಳ್, ಮಂಗಳೂರು ಎಜಿಎಂ ನಬಾರ್ಡ್ ಸಂಗೀತಾ ಕರ್ತಾ, ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಪುತ್ತೂರು ವಿಭಾಗ ಸಹಾಯಕ ನಿಬಂಧಕ ರಘು ಎಂ.ಎಸ್., ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ ಭಾಗವಹಿಸಲಿದ್ದಾರೆ.
ಸಂಘವು ಸತತ 7 ವರ್ಷಗಳಿಂದ ಒಂದು ಕೋಟಿಗೂ ಮಿಕ್ಕಿ ಲಾಭಾಂಶ ಗಳಿಸುತ್ತಿದೆ. ಈ ಬಾರಿ ಒಂದು ಕೋಟಿ ಎಂಬತ್ತಾರು ಲಕ್ಷ ರೂ. ಲಾಭ ಗಳಿಸಿದ್ದು, ಸಂಘದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಉದ್ಘಾಟನೆ ನಂತರ ಕೊಠಡಿಗಳನ್ನು ಬಾಡಿಗೆಗೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಲ್ಲಿ ಹೊಸ ಗೋದಾಮು ಕಟ್ಟಡ ನಿರ್ಮಾಣ, ಸಂಘದ ಆಫೀಸ್, ಕಚೇರಿ, ಪಡಿತರ, ರಾಸಾಯನಿಕ ಗೊಬ್ಬರ ಕೊಠಡಿ ನಿರ್ಮಾಣಗೊಂಡಿದೆ. ಸುಂದರ್ ಹೆಗ್ಡೆ ಬಿ.ಇ. ವೇಣೂರು ಸೊಸೈಟಿ ಅಧ್ಯಕ್ಷ ಸೊಸೈಟಿ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದು ಕಡಿಮೆ ಅವಧಿಯಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ನೀಡುತ್ತದೆ. ಗೃಹ ನಿರ್ಮಾಣ, ವಾಹನ, ಇಲೆಕ್ಟ್ರಾನಿಕ್ಸ್, ಪೀಠೋಪಕರಣ, ಚಿನ್ನಾಭರಣ, ಕೃಷಿ ಸಹಿತ ಇತರ ಸಾಲ ನೀಡಲಾಗುತ್ತದೆ. ಠೇವಣಾತಿದಾರರಿಗೆ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ, ನ್‌ಟೆ, ಆರ್‌ಟಿಜಿಎಸ್ ಸೌಲಭ್ಯ ಒಳಗೊಂಡಿದೆ. 5,185 ಸದಸ್ಯರು ಸಂಘದಲ್ಲಿದ್ದು, ವಿವಿಧ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಜಯಂತ್ ಪೂಜಾರಿ ವೇಣೂರು ಸೊಸೈಟಿ ಸಿಇಒ