ರಸ್ತೆ ಬದಿ ಎಳನೀರು ಕುಡಿಯೋ ಅಭ್ಯಾಸ ಇದ್ಯಾ?; ಚರಂಡಿ ನೀರನ್ನು ಚುಮುಕಿಸಿ ಕೊಡ್ತಾರೆ ಹುಷಾರ್​​

water
Published on

ಉತ್ತರಪ್ರದೇಶ: ಎಳನೀರು ಹಲವಾರು ಪೋಷಕಾಂಶಗಳನ್ನು ಹೊಂದಿರುವ ಪಾನೀಯವಾಗಿದೆ. ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳನ್ನು ಹೊಂದಿದೆ.

ರಸ್ತೆಯಲ್ಲಿ ಹೋಗುತ್ತಲಿದ್ದರೆ, ಆಗ ಕೆಲವು ವ್ಯಾಪಾರಿಗಳು ಗಾಡಿಗಳಲ್ಲಿ ಎಳನೀರು ಮಾರಾಟ ಮಾಡುವವರು ನಮಗೆ ಸಿಗುತ್ತಾರೆ. ನೈಸರ್ಗಿಕವಾಗಿ ಸಿಗುವ ತಂಪುಪಾನಿಯ ಎಂದು ನಾಲಿಗೆ ಚಪ್ಪರಿಸಿ ಕುಡಿಯುವ ನಾವು ಇನ್ಮುಂದೆ ಸ್ವಲ್ಪ ಯೋಚನೆ ಮಾಡುವಂತೆ ಮಾಡುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಉತ್ತರ ಪ್ರದೇಶದ ನೊಯ್ಡಾದಲ್ಲಿ ಎಳೆ​ನೀ​ರು ವ್ಯಾಪಾರಿಯೊಬ್ಬ ಎಳೆ​ನೀ​ರಿನ ಕಾಯಿಗಳಿಗೆ ಚರಂಡಿಯ ನೀರು ಚುಮುಕಿಸಿದ್ದಾನೆ. ಈ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪ್ಯಾಪಾರಿ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ.

ಈ ವಿಡಿಯೋವನ್ನು ಶ್ರೀ ರಾಧಾ ಸ್ಕೈ ಗಾರ್ಡನ್ ಬಳಿ ಸೆರೆ ಹಿಡಿದಿರುವ ವಿಡಿಯೋ ಆಗಿದೆ. ಜಾಗೃತಗೊಂಡು, ಮಾರಾಟಗಾರರನ್ನು ಗುರುತಿಸಿ ಅದೇ ದಿನ ಸ್ಥಳದಲ್ಲಿ ಬಂಧಿಸಲಾಯಿತು. ಎಳನೀರು ವ್ಯಾಪಾರಿ ಸಮೀರ್‌(28) ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಮೀರ್, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವನು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಥಳೀಯ ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಜಪೂತ್ ಮಾತನಾಡಿ, 'ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net