ಬ್ರಹ್ಮಾವರದಲ್ಲಿ ವಾಹನಗಳ ತಪಾಸಣೆ ಕಾರ್ಯಾಚರಣೆ

bmr
Published on

ಬ್ರಹ್ಮಾವರ: ಶಾಲಾ ವಿದ್ಯಾರ್ಥಿಗಳ ಸಂಚಾರ ಸುರಕ್ಷತೆಗಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಿಂದ ಶಾಲಾ ವಾಹನಗಳ ತಪಾಸಣೆ ಕಾರ್ಯಾಚರಣೆ ಗುರುವಾರದಿಂದ ಆರಂಭವಾಗಿದೆ.

ವಿದ್ಯಾರ್ಥಿಗಳನ್ನು ಕರೆದೊಯ್ಯುವ ಬಸ್, ಆಟೋ, ಶಾಲಾ ವಾಹನಗಳ ದಾಖಲೆ, ವೇಗಮಿತಿ ಮತ್ತು ಲೆಕ್ಕಕ್ಕಿಂತ ನಿಯಮ ಮೀರಿ ಹೆಚ್ಚು ಮಕ್ಕಳನ್ನು ವಾಹನದಲ್ಲಿ ತುಂಬಿಸಿಕೊಂಡು ಬರುವುದು ಮುಂತಾದ ಅನೇಕ ನಿಯಮ ಪಾಲಿಸುವಂತೆ ಮನವರಿಕೆ ವಾಡಲಾಗುತ್ತದೆ. ನಿಯಮ ಉಲ್ಲಂಘಿಸಿರುವುದ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಠಾಣಾ ವ್ಯಾಪ್ತಿಯ ದೂಪದಕಟ್ಟೆ, ಕುಂಜಾಲು ಕ್ರಾಸ್, ಎಸ್.ಎಂ.ಎಸ್ ಜಂಕ್ಷನ್, ಪೇತ್ರಿ ಜಂಕ್ಷನ್‌ನಲ್ಲಿ ಪಿಎಸ್‌ಐ ಸುದರ್ಶನ್, ಅಶೋಕ್, ಎಎಸ್‌ಐ ಜಯಕುವಾರ್ ಶಾಂತರಾಜ್ ಹಾಗೂ ಸಿಬ್ಬಂದಿ ವಾಹಗಳನ್ನು ತಪಾಸಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net