ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ!

Veg-Biryani
Published on

ಬೆಂಗಳೂರು: ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ ಅಂತ ಘೋಷಣೆಯಾಗಿದೆ ! ಒಪ್ಪಿಕೊಳ್ತೀರೋ ಬಿಡ್ತೀರೋ ಅಥವಾ ಇದೊಂದು ಚರ್ಚಾರ್ಹ ವಿಚಾರ ಅಂತೀರೋ, ವಿವಾದಕ್ಕೆ ಕಾರಣವಾಗುತ್ತೋ ಗೊತ್ತಿಲ್ಲ ! ವೆಜ್ ಬಿರಿಯಾನಿ ಈಸ್ ಇಂಡಿಯಾಸ್​ ನ್ಯಾಷನಲ್ ಫುಡ್ ಎಂಬ ಘೋಷಣೆಯೊಂದು ಹೊರಬಿದ್ದಿದೆ..

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಹಲವು ದಾಖಲೆಗಳಿಗೆ ಭಾಜನವಾಗಿದ್ದು ಸುಳ್ಳಲ್ಲ. ಫಲಿತಾಂಶವೂ ಅಷ್ಟೇ- ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಗೆಲ್ಲೋದು ಅಂತ ಹೇಳ್ತಾ ಬಂದವರಿಗೆ ಕೊನೆಯಲ್ಲಿ ನಿರೀಕ್ಷೆ ಮೀರಿದ ಹೊಡೆತ ಬಿತ್ತು. ಆದಾಗ್ಯೂ, ಪಟ್ಟು ಬಿಡದ ಟ್ರಂಪ್ ರಚ್ಚೆ ಹಿಡಿದು ಕುಳಿತಿದ್ದು, ಗೆಲ್ಲುವುದಕ್ಕೆ ಇರುವ ಅವಕಾಶಗಳೇನು ಎಂದು ಚಿಂತನೆ ನಡೆಸುತ್ತ, ಮನಸ್ಸಿನ ಭಾವನೆಗಳನ್ನು ಟ್ವೀಟ್ ಮೂಲಕ ಪ್ರಕಟಿಸುತ್ತಿದ್ದಾರೆ. ಟ್ವಿಟರ್ ಕೂಡ ಸುಮ್ಮನೆ ಕುಳಿತಿಲ್ಲ. ಅಮೆರಿಕ ಅಧ್ಯಕ್ಷರ ಟ್ವೀಟ್​ ಕೆಳಗೊಂದು ಷರಾ ಬರೆಯುತ್ತಲೇ ಬಂದಿದೆ.

ಇವುಗಳ ನಡುವೆ ಇಂದು ಗಮನ ಸೆಳೆದಿದೆ ಒಂದು ಟ್ವೀಟ್. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಐ ವನ್ ದ ಎಲೆಕ್ಷನ್ !" ಎಂಬ ಒಂದು ಸಾಲಿನ ಟ್ವೀಟ್ ಮಾಡಿದ್ದಾರೆ. ಇದರ ಕೆಳಗೆಯೇ ಟ್ವಿಟರ್ ಲಿಂಕ್ ಒಂದು ಹೇಳುತ್ತಿರುವುದು ಇಷ್ಟು - ಅಫೀಷಿಯಲ್ ಸೋರ್ಸಸ್ ಕಾಲ್ಡ್ ದಿಸ್ ಎಲೆಕ್ಷನ್ ಡಿಫರೆಂಟ್ಲಿ . ಈ ಟ್ವೀಟ್​ ಅನ್ನು ಸ್ವಿಗ್ಗಿ ಎಂಬ ಆಹಾರ ಪೂರೈಕೆದಾರ ಸಂಸ್ಥೆ ತನ್ನ ವ್ಯಾಪಾರೋದ್ದೇಶಕ್ಕೆ ಬಳಸಿಕೊಂಡಿರುವುದು ಹೀಗೆ.. "ಆ್ಯಂಡ್ ವೆಜ್ ಬಿರಿಯಾನಿ ಈಸ್ ಇಂಡಿಯಾಸ್ ನ್ಯಾಷನಲ್ ಫುಡ್ !" ಎಂಬ ಕಮೆಂಟ್​ನೊಂದಿಗೆ ಟ್ರಂಪ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದೆ !

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net