ಸಿಂಹಪ್ರಿಯಾ ಜೋಡಿಗೆ ಮದುವೆ ಗಿಫ್ಟ್ … ಹೊಸ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ

Yada Yada Hi
Published on

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಡುವೆ ಕೆಲವು ವರ್ಷಗಳಿಂದ ಪರಿಚಯವಿದ್ದರೂ, ಅವರನ್ನು ಇನ್ನಷ್ಟು ಹತ್ತಿರವಾಗಿಸಿದ್ದು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ತೆಲುಗಿನ 'ಎವುಡು' ಚಿತ್ರದ ಕನ್ನಡ ರೀಮೇಕ್​. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಮಧ್ಯೆ, ವಸಿಷ್ಠ ಮತ್ತು ಹರಿಪ್ರಿಯಾ ನಡುವೆ ಪ್ರೇಮಾಂಕುರವಾಗಿ ಇಂದು ಮದುವೆಯಾಗಿದೆ.

ಈ ಸಂದರ್ಭದಲ್ಲಿ ಚಿತ್ರತಂಡದವರು ವಸಿಷ್ಠ ಮತ್ತು ಹರಿಪ್ರಿಯಾಗೆ ಶುಭ ಕೋರಲು ಒಂದು ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಚಿತ್ರದ ಹೆಸರು ಸಹ ಘೋಷಣೆಯಾಗಿದೆ. ಅಂದಹಾಗೆ, ಚಿತ್ರದ ಹೆಸರೇನು ಗೊತ್ತಾ? 'ಯದಾ ಯದಾ ಹೀ' ಎಂದು.

ಈ ಹಿಂದೆ ತೆಲುಗಿನಲ್ಲಿ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಅಶೋಕ್‌ ತೇಜ ಈ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಜತೆಗೆ ದಿಗಂತ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಮರ್ಡರ್​ ಮಿಸ್ಟ್ರಿಯಾಗಿದ್ದು, ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ ಪಾತ್ರವನ್ನು ಹರಿಪ್ರಿಯಾ ಹಾಗೂ ಅಡವಿ ಶೇಷ್ ಪಾತ್ರವನ್ನು ದಿಗಂತ್ ಮಾಡಿದ್ದಾರೆ. ಈ ಚಿತ್ರವನ್ನು ರಾಜೇಶ್ ಅಗರವಾಲ್ ನಿರ್ಮಿಸಿದ್ದಾರೆ.

ಸ್ಪಾನಿಶ್​ ಭಾಷೆಯಲ್ಲಿ 'ದಿ ಇನ್ವಿಸಬಲ್​ ಗೆಸ್ಟ್​' ತಯಾರಾಗಿದ್ದ ಈ ಚಿತ್ರ, ನಂತರ ಹಿಂದಿಯಲ್ಲೂ ನಿರ್ಮಾಣವಾಗಿತ್ತು. ಈಗ ಕನ್ನಡದಲ್ಲೂ ಸಿದ್ಧವಾಗಿರುವ ಈ ಚಿತ್ರಕ್ಕೆ ಚರಣ್​ ಪಕಡ ಅವರ ಸಂಗೀತ ಮತ್ತು ಯೋಗಿ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net