ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ ...

Vasishta Simha - Final
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟರು ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವುದು ಹೊಸ ವಿಷಯವೇನಲ್ಲ. ಈಗಾಗಲೇ ದರ್ಶನ್​, ಶಿವರಾಜಕುಮಾರ್​, ಇಂದ್ರಜಿತ್​ ಲಂಕೇಶ್​ ಸೇರಿದಂತೆ ಹಲವರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.

ಈಗ ಆ ಸಾಲಿಗೆ ವಸಿಷ್ಠ ಸಿಂಹ ಸಹ ಸೇರಿದ್ದಾರೆ. ಆದರೆ, ಇದುವರೆಗೂ ಯಾರೂ ಮಾಡದ ಒಂದು ಸಾಹಸವನ್ನು ಅವರು ಮಾಡಿದ್ದಾರೆ. ಇದುವರೆಗೂ ಪ್ರಾಣಿಗಳನ್ನು ದತ್ತು ಪಡೆದವರೆಲ್ಲಾ ಹೆಚ್ಚಾಗು ಆನೆ, ಹುಲಿ ಮುಂತಾದ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದರು. ಸಿಂಹವನ್ನು ದತ್ತು ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ವಸಿಷ್ಠ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ದತ್ತು ಪಡೆದ ಮೊದಲ ಸೆಲೆಬ್ರಿಟಿಯಾಗಿದ್ದಾರೆ.

ಶುಕ್ರವಾರ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಭೇಟಿ ಕೊಟ್ಟ ವಸಿಷ್ಠ ಎಂಟು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಡಾ. ರಾಜಕುಮಾರ್​ ಅವರ ಹುಟ್ಟುಹಬ್ಬವಾದ ಏಪ್ರಿಲ್​ 24ರಂದು ಈ ಸಿಂಹದ ಮರಿ ಹುಟ್ಟಿತ್ತು. ಆ ಮರಿಯನ್ನು ದತ್ತು ಪಡೆದಿರುವ ವಸಿಷ್ಠ, ಅದಕ್ಕೆ ವಿಜಯನರಸಿಂಹ ಎಂಬ ಹೆಸರನ್ನು ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net