

ಕಾಸರಗೋಡು: ವರ್ಕಾಡಿ ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘ ಮಹಾಸಭೆ ವರ್ಕಾಡಿ ಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಪಾವಳ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಂಟಪ್ಪ ಪೂಜಾರಿ ಕಳಿಯೂರು, ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂಜಾರಿ ಕಳಿಯೂರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಕಳಿಯೂರು ಅವರನ್ನು ಆಯ್ಕೆ ಮಾಡಲಾಯಿತು. ಭುಜಂಗ ಪೂಜಾರಿ ಕಡಂಬಾರ್ - ಅಧ್ಯಕ್ಷ, ಪದ್ಮನಾಭ ಪೂಜಾರಿ ಪಾವೂರು - ಉಪಾಧ್ಯಕ್ಷ, ಪೂರ್ಣಿಮಾ ಬೇರಿಂಜ - ಕಾರ್ಯದರ್ಶಿ, ಪ್ರಮೀಳಾ ರುನಾಥ ಪೂಜಾರಿ ವರ್ಕಾಡಿ - ಜತೆಕಾರ್ಯದರ್ಶಿ, ನವೀನ್ ಪೂಜಾರಿ ಮಡ್ವ - ಕೋಶಾಧಿಕಾರಿ, ದಾಮೋದರ ಪೂಜಾರಿ ತಚ್ಚಿರೆ ಮತ್ತು ನವೀನ್ ಪೂಜಾರಿ ಪಾವಳ - ಸಂಚಾಲಕ, ಜಗದೀಶ್ ಪೂಜಾರಿ ತಾವಾರ್ ಅವರನ್ನು ಭಜನಾ ಸಮಿತಿ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂಜಾರಿ ಕಳಿಯೂರು, ಚಂದ್ರಹಾಸ ಪೂಜಾರಿ ಕಡಂಬಾರ್, ತಿಲಕ್ ಪ್ರಸಾದ್ ಅಡೆಕಳಕಟ್ಟೆ, ಪ್ರಭಾಕರ ಪೂಜಾರಿ ಪಾವಳ, ಅಶೋಕ್‌ಕುಮಾರ್ ತಚ್ಚಿರೆ, ಹೇಮಲತಾ ಕಳಿಯೂರು, ಜಯಪ್ರಶಾಂತ್ ಪಾಲೆಂಗ್ರಿ ಆಯ್ಕೆಯಾದರು. ಸದಸ್ಯರಾದ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಕೋಶಾಧಿಕಾರಿ ನವೀನ್ ಪೂಜಾರಿ ಮಡ್ವ ವಂದಿಸಿದರು.