ವಾರಾಣಸಿಯ ವಿಶ್ವನಾಥನನ್ನೂ ಬಿಟ್ಟಿಲ್ಲ ಕೊರೊನಾ ವೈರಸ್​: ಮಾಸ್ಕ್​ ತೊಟ್ಟು ದರ್ಶನ ನೀಡುತ್ತಿರುವ ದೇವರು

varanasi temple
Published on

ವಾರಾಣಸಿ: ಕೊರೊನಾ ವೈರಸ್​ ಭಾರತಕ್ಕೆ ಬಂದು ತನ್ನ ಯಮರೂಪವನ್ನು ತೋರಲಾರಂಭಿಸಿದೆ. ದೇಶದ ಜನತೆ ಕೊರೊನಾ ವೈರಸ್​ಗೆ ಹೆದರಿರುವಂತೆಯೇ ಜನರ ಕಾಯುವ ದೇವರೂ ಸಹ ವೈರಸ್​ನ ದಾಳಿಗೆ ಹೆದರಿದೆ. ವಾರಾಣಸಿಯ ವಿಶ್ವನಾಥ ದೇವಾಲಯದಲ್ಲಿ ವೈರಸ್​ನಿಂದ ದೇವರನ್ನು ರಕ್ಷಿಸಲು ಅದರ ಜತೆಯಲ್ಲಿ ವೈರಸ್​ನ ಕುರಿತಾಗಿ ಜನ ಜಾಗೃತಿ ಮೂಡಿಸಲು ಅಲ್ಲಿನ ಅರ್ಚಕರು ಮುಂದಾಗಿದ್ದು, ಶಿವಲಿಂಗಕ್ಕೂ ಸಹ ಮಾಸ್ಕ್​ ಹಾಕಿದ್ದಾರೆ.

ವಾರಾಣಸಿಯ ವಿಶ್ವನಾಥ ದೇವಾಲಯದ ಶಿವಲಿಂಗಕ್ಕೆ ಬೇಸಿಗೆಯಲ್ಲಿ ಫ್ಯಾನ್​, ಎಸಿ ವ್ಯವಸ್ಥೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಸ್ವೆಟರ್​, ಹೊದಿಕೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಈಗ ದೇಶದಲ್ಲಿ ಕಾಡಲಾರಂಭಿಸಿರುವ ಕೊರೊನಾ ವೈರಸ್​ನಿಂದ ಕಾಪಾಡುವುದಕ್ಕಾಗಿ ಮಾಸ್ಕ್​ ಹಾಕಲಾಗಿದೆ. ಇದರಿಂದಾಗಿ ಜನರಲ್ಲಿ ವೈರಸ್​ನ ಕುರಿತಾಗಿ ಅರಿವು ಮೂಡಲಿದೆ ಎಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ.

ಭಕ್ತಾದಿಗಳು ಶಿವಲಿಂಗವನ್ನು ಮುಟ್ಟಿದರೆ ವೈರಸ್​ ಹೆಚ್ಚು ಹೆಚ್ಚು ಜನರಿಗೆ ತಗಲುವ ಸಾಧ್ಯತೆ ಇದೆ. ಹಾಗಾಗಿ ಮಾಸ್ಕ್​ ಹಾಕಲಾಗಿರುವ ದೇವರನ್ನು ಭಕ್ತಾದಿಗಳು ಮುಟ್ಟಬಾರದು ಎಂದು ಅರ್ಚಕರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net