ಬೆಳ್ತಂಗಡಿ: ಮೂಡುಬಿದಿರೆ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿಭಾಗದವರಿಗೆ ಆಯೋಜಿಸಿದ್ದ ಅಶ್ವಮೇಧ ಕಾಮರ್ಸ್ ಫೆಸ್ಟ್‌ನಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ 10 ಪದವಿ ಪೂರ್ವ ಕಾಲೇಜುಗಳು ಭಾಗವಹಿಸಿದ್ದವು. ರೀಲ್ಸ್ ಮೇಕಿಂಗ್‌ನಲ್ಲಿ ಉದಿತ್ ರೈ ಮತ್ತು ಸಾಧನ್ ಪ್ರಥಮ, ಮಾಡೆಲ್ ಪ್ರದರ್ಶನದಲ್ಲಿ ಅನನ್ಯಾ ಮತ್ತು ಉತ್ತಮ್ ಪ್ರಥಮ, ಮಾಕ್ ಪ್ರೆಸ್‌ನಲ್ಲಿ ಉಜ್ವಲ್ ಪ್ರಥಮ, ಮ್ಯಾಡ್ ಆಡ್‌ನಲ್ಲಿ ಪೂರ್ಣೇಶ್, ಸಮನ್ವಿತ್, ಅಭಿಷೇಕ್, ಅಶ್ವತ್, ಶಿವಾನಿ ಪ್ರಥಮ, ವಾಣಿಜ್ಯ ರಸಪ್ರಶ್ನೆಯಲ್ಲಿ ಆದಿತ್ಯ ಮತ್ತು ಆಕಾಶ್ ದ್ವಿತೀಯ, ಬಿಜಿನೆಸ್ ಪ್ರೆಸೆಂಟೇಷನ್‌ನಲ್ಲಿ ಸ್ವರ ಹೆಗ್ಡೆ ದ್ವಿತೀಯ ಮತ್ತು ಬ್ರಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಶ್ರುತಿ ಮತ್ತು ಸುಶ್ಮಿತಾ ತೃತೀಯ ಪ್ರಶಸ್ತಿ ಪಡೆದು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಗುರಿ ತಲುಪಲು ಬೇಕು ಧನಾತ್ಮಕ ಚಿಂತನೆ : ಮನೋತಜ್ಞ ನವೀನ್ ಎಲ್ಲಂಗಳ ಅನಿಸಿಕೆ