ಗುರಿ ತಲುಪಲು ಬೇಕು ಧನಾತ್ಮಕ ಚಿಂತನೆ : ಮನೋತಜ್ಞ ನವೀನ್ ಎಲ್ಲಂಗಳ ಅನಿಸಿಕೆ

New Project (47)
Published on

ಬದಿಯಡ್ಕ: ನಿರಂತರ ಸಾಧನೆ ಮತ್ತು ಧನಾತ್ಮಕ ಚಿಂತನೆಯಿಂದ ಗುರಿ ತಲುಪಲು ಸಾಧ್ಯ ಎಂದು ಖ್ಯಾತ ಮನೋತಜ್ಞ ನವೀನ್ ಎಲ್ಲಂಗಳ ತಿಳಿಸಿದರು.

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 9 ಮತ್ತು 10ನೇ ತರಗತಿಯ ಮಕ್ಕಳು ಹಾಗೂ ಪಾಲಕರಿಗಾಗಿ ಶುಕ್ರವಾರ ಜರುಗಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಧನಾತಕ್ಮ ಕಲಿಕೆ ಹಾಗೂ ಗುರಿಗೆ ಸಿದ್ಧತೆ ಹೇಗೆ ಸಾಧ್ಯ ಎಂಬ ಕಾರ್ಯಾಗಾರದಲ್ಲಿ ಅವರು ಧನಾತ್ಮಕ ಚಿಂತನೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದೆಂದು ಸಲಹೆಗಳನ್ನು ನೀಡಿದರು. ನಿರಂತರವಾಗಿ 21ದಿನ ಧನಾತ್ಮಕ ಚಿಂತನೆಗಳೊಂದಿಗೆ ಮುಂದುವರಿದಾಗ ಅದು ಸುಪ್ತಮನಸ್ಸನ್ನು ಸೇರಿಕೊಳ್ಳುವುದರೊಂದಿಗೆ ನಮ್ಮ ಜೀವನದ ಭಾಗವಾಗುತ್ತದೆ. ನಾವು ನಮ್ಮನ್ನೇ ವಿಮರ್ಶೆ ಮಾಡಿಕೊಳ್ಳುತ್ತಾ ನಮ್ಮೊಳಗಿನ ಉತ್ತಮ ವ್ಯಕ್ತಿತ್ವವನ್ನು ಪ್ರದರ್ಶಿಸಬೇಕು ಎಂದರು.

ಶಾಲಾ ಆಡಳಿತ ಸಮಿತಿ ಸದಸ್ಯ ಮಧುಸೂದನ ತಿಮ್ಮಕಜೆ ಉದ್ಘಾಟಿಸಿದರು. ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಶಿಕ್ಷಕಿ ರಶ್ಮಿ ಪೆರ್ಮುಖ, ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net