ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ; ಶೀಘ್ರದಲ್ಲೇ ಸ್ಲೀಪರ್ ಕೋಚ್‌ಗಳೊಂದಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್..

vandebharat
Published on

ನವದೆಹಲಿ: ಭಾರತೀಯ ರಲ್ವೇಯು  ವಂದೇ ಭಾರತ್ ರೈಲುಗಳೊಂದಿಗೆ ವೇಗದ ಪ್ರಯಾಣವನ್ನು ನೀಡುವ ಮೂಲಕ ಸೌಲಭ್ಯಗಳ ವಿಷಯದಲ್ಲಿ ಮತ್ತೊಂದು ಹೆಜ್ಜೆ ಇಡಲಿದೆ. ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ಪರಿಕಲ್ಪನೆಯ ರೈಲುಗಳು 2024ರಲ್ಲಿ ಹೊರತರಲಾಗುತ್ತಿದೆ.

ಈ ಹೊಸ ರೈಲುಗಳ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಂಚಿಕೊಂಡಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ಮಾರ್ಚ್‌ನಲ್ಲಿ ಈ ರೈಲು ಓಡಬಹುದು.

ಈ ಸ್ಲೀಪರ್ ಕೋಚ್‌ಗಳನ್ನು ಭಾರತೀಯ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಮತ್ತು ರಷ್ಯಾದ ಟಿಎಂಎಚ್ ಗ್ರೂಪ್ ಜಂಟಿಯಾಗಿ ತಯಾರಿಸಿವೆ. ಒಟ್ಟು 200 ರೈಲುಗಳ ಪೈಕಿ 120 ರೈಲುಗಳನ್ನು ರಷ್ಯಾದ ಕಂಪನಿ ತಯಾರಿಸಲಿದೆ. ಉಳಿದ 80 ರೈಲುಗಳನ್ನು ಟಿಟಾಗರ್ ವ್ಯಾಗನ್ಸ್ ಮತ್ತು ಬಿಎಚ್‌ಇಎಲ್ ಒಳಗೊಂಡ ಒಕ್ಕೂಟದಿಂದ ತಯಾರಿಸಲಾಗುವುದು. ಈ ಹೊಸ ಸ್ಲೀಪರ್ ವಂದೇ ಭಾರತ್ ರೈಲುಗಳು ಅಸ್ತಿತ್ವದಲ್ಲಿರುವ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಬದಲಾಯಿಸಲಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್‌ ವಿಶೇಷತೆ: ಈ ಸ್ಲೀಪರ್ ವಂದೇ ಭಾರತ್ ರೈಲುಗಳು 34 ಸೀಟುಗಳನ್ನು ಸಿಬ್ಬಂದಿಗೆ ಮೀಸಲಿಡಲಾಗಿದೆ. ಅಂದರೆ ಒಟ್ಟು 887 ಮಂದಿ ಪ್ರಯಾಣಿಸಬಹುದು. ಪ್ರತಿ ಕೋಚ್ ಮೂರು ಶೌಚಾಲಯಗಳನ್ನು ಹೊಂದಿದೆ. ಈ ರೈಲು 16 ವಿಶಾಲವಾದ ಕೋಚ್‌ಗಳನ್ನು ಹೊಂದಿದೆ. ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ. ವಂದೇ ಭಾರತ್ ಸ್ಲೀಪರ್ ಆವೃತ್ತಿಯ 400 ರೈಲುಗಳಿಗೆ ಸರ್ಕಾರ ಟೆಂಡರ್ ಆಹ್ವಾನಿಸಿದೆ. ಈ ನಡುವೆ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಶೇರ್ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net