

ನವದೆಹಲಿ: ವಂದೇ ಭಾರತ್(Vande Bharat) ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದ ಭಾಗಲ್ಪುರದ ಮೊಹಮ್ಮದ್ ಹುಸೇನ್ ಅಲಿಯಾಸ್ ಶಾಹಿದ್ ನನ್ನು ಎಟಿಎಸ್ ಬಂಧಿಸಿದೆ.
ವಾರಣಾಸಿ(ಕಾಶಿ) ರೈಲು ನಿಲ್ದಾಣದ ನಡುವೆ ವಂದೇ ಭಾರತ್‌ಗೆ ಕಲ್ಲು ತೂರಾಟ ನಡೆಸಿದ್ದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಈ ದುಷ್ಕೃತ್ಯ ಎಸಗಿದ್ದ ದೇಶದ್ರೋಹಿ ಹುಸೇನ್ ಅಲಿಯಾಸ್ ಶಾಹಿದ್ ಬುಧವಾರ ಎಟಿಎಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.
ರೈಲುಗಳ ಮೇಲೆ ಕಲ್ಲು ತೂರಾಟದ ಹಿಂದಿನ ಏಕೈಕ ಉದ್ದೇಶ ಪ್ರಯಾಣಿಕರ ಮೊಬೈಲ್ ಫೋನ್ ಕಸಿದುಕೊಳ್ಳುವುದಾಗಿದೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ ಮತ್ತೇನಾದರೂ ಉದ್ದೇಶವಿತ್ತಾ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಕಲ್ಲು ತೂರಾಟದಿಂದ ರೈಲಿನ ವೇಗ ತಗ್ಗಿ, ಕಿಟಕಿಯ ಬಳಿ ಕುಳಿತಿದ್ದವರ ಮೊಬೈಲ್ ಕಸಿದುಕೊಂಡು ಓಡಿ ಹೋಗಿದ್ದಾಗಿ ಕಿಡಿಗೇಡಿ ಹುಸೇನ್ ತಿಳಿಸಿದ್ದಾನೆ.
ವ್ಯಾಸನಗರ ಮತ್ತು ಕಾಶಿ ಸ್ಟೇಷನ್ ಪ್ರದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟದ ಹಲವಾರು ಘಟನೆಗಳು ನಡೆದಿದ್ದವು. ಘಟನೆಗಳಿಗೆ ಸಂಬಂಧಿಸಿದಂತೆ ಆರ್‌ಪಿಎಫ್ ಪ್ರಕರಣ ದಾಖಲಿಸಿತ್ತು. ತನಿಖೆಯ ಸಮಯದಲ್ಲಿ, ಕಲ್ಲು ತೂರಾಟದ ಆರೋಪಿ ಪವನ್ ಕುಮಾರ್ ಸಾಹ್ನಿಯನ್ನು ಈಗಾಗಲೇ ಬಂಧಿಸಲಾಗಿದೆ. ಅವನ ಸಹಚರನಾಗಿದ್ದ ಇಶಾಕ್‌ಚಕ್‌ನ (ಭಾಗಲ್‌ಪುರ, ಬಿಹಾರ) ಮೊಹಮ್ಮದ್ ಹುಸೇನ್ ಅಲಿಯಾಸ್ ಶಾಹಿದ್ ನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಇದೀಗ ಸಿಕ್ಕಿಬಿದ್ದಿದ್ದಾನೆ.