ಸಸಿಗಳ ಪಾಲನೆಯಿಂದ ಆರೋಗ್ಯಕರ ವಾತಾವರಣ : ಮೂಡುಬಿದಿರೆ ಉಪಅರಣ್ಯಾಧಿಕಾರಿ ನಿಂಗಪ್ಪ ಅನಿಸಿಕೆ

New Project (36)
Published on

ಹಳೆಯಂಗಡಿ: ಸಸಿಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಿದರೆ ಆರೋಗ್ಯಕರ ವಾತಾವರಣ ಸೃಷ್ಟಿ ಸಾಧ್ಯ ಎಂದು ಮೂಡುಬಿದಿರೆ ಉಪಅರಣ್ಯಾಧಿಕಾರಿ ನಿಂಗಪ್ಪ ವಾಲಿ ಹೇಳಿದರು.

ಮೂಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ ಪ್ರಾಯೋಜಕತ್ವದೊಂದಿಗೆ ಪಡುಪಣಂಬೂರು ಗ್ರಾಮ ಪಂಚಾಯಿತಿ, ತೋಕೂರು ಓಂಕಾರೇಶ್ವರಿ ಮಂದಿರ ಮತ್ತು ಮೂಡುಬಿದಿರೆ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ವನಮಹೋತ್ಸವ ಮತ್ತು ಸಸಿ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಓಂಕಾರೇಶ್ವರಿ ಮಂದಿರದ ಅಧ್ಯಕ್ಷ ಸದಾಶಿವ ಟಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ ಎಸ್.ಪೂಜಾರಿ, ಮುಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ ಉಪಾಧ್ಯಕ್ಷ ಶಂಕರ ಮಾಸ್ಟರ್ ಗೋಳಿಜೋರ, ಪಡುಪಣಂಬೂರು ಗ್ರಾ.ಪಂ. ಸದಸ್ಯ ಮೋಹನದಾಸ್, ಅನಿಲ ಯಾನೆ ಸೀತಾರಾಮ, 10ನೇ ತೋಕೂರು ಯಕ್ಷ ದೇಗುಲದ ಅಧ್ಯಕ್ಷ ದಿನಕರ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಅಮೀನ್ ತೋಕೂರು, ಮೂಲ್ಕಿ ಹೋಬಳಿ ಮುಂಡಾಲ ಸಮಾಜ ಹಾಗೂ ಶ್ರೀ ಓಂಕಾರೇಶ್ವರಿ ಮಂದಿರದ ಸದಸ್ಯರು ಉಪಸ್ಥಿತರಿದ್ದರು. ಹಿಮಕರ್ ವಂದಿಸಿದರು. ರಮಾನಂದ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net