ಲಯನ್ಸ್ ಕ್ಲಬ್ ಹಿರಿಯ ನಾಗರಿಕರ ದಿನಾಚರಣೆ

New Project (31)
Published on

ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆಯನ್ನು ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಆಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.

ಆಶ್ರಮದ ನಿರ್ದೇಶಕ ಮೋನ್ಸಿಂಜೊರ್ ಎಡ್ವಿನ್ ಸಿ.ಪಿಂಟೋ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ವತಿಯಿಂದ 10 ಸಾವಿರ ರೂ. ಡಯಾಲಿಸಿಸ್ ಕೇಂದ್ರಕ್ಕೆ ನೀಡಲಾಯಿತು.

ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಕೋಶಾಧಿಕಾರಿ ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ವೃದ್ಧಾಶ್ರಮದ ಸುಪೀರಿಯರ್ ಸಿ.ಪ್ರೆಸಿಲ್ಲಾ, ಕ್ಲಬ್ ಸದಸ್ಯರಾದ ಮುನ್ನಾ ರಾವ್, ಮುರಳೀಧರನ್, ಎಂ.ಕೆ.ದಿನೇಶ್, ವಿನೋದ್ ಡೇಸಾ, ರಿಚರ್ಡ್ ಕರ್ಡೋಜ, ಮಾರ್ಕ್ ಮೆಂಡೋನ್ಸಾ, ನವಾನಂದ, ದಯಾನಂದ, ವಿನೋದ್ ಕುಮಾರ್, ಆಂಟನಿ ಡಿಸೋಜ, ರೋಕ್ಕಿ ಪಿಂಟೋ, ಸಂಗನಣ ಬಸಯ್ಯ ಹಿರೇಮಠ್, ಆಶ್ರಮದ ಮೇಲ್ವಿಚಾರಕರು ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net