ಅಭಿವೃದ್ಧಿ ಪರಿಣಾಮ ಪ್ರಕೃತಿ ವಿಕೋಪ : ವನಮಹೋತ್ಸವದಲ್ಲಿ ವಿಮಲ್ ಬಾಬು ಅನಿಸಿಕೆ

vana
ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು, ಲಯನ್ಸ್ ಅಧ್ಯಕ್ಷ ರಾಜೇಶ್ ಎನ್.ಎಸ್., ಮುಖ್ಯಶಿಕ್ಷಕಿ ಮಾಲಿನಿ ಕೆ.ಎಸ್.ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ನಮ್ಮ ಪರಿಸರದಲ್ಲಿ ನಾವು ಪ್ರಕೃತಿ ಜತೆಗೆ ಬೆಳೆದರೂ ಪ್ರಕೃತಿ ಮಹತ್ವ ನಮಗೆ ತಿಳಿದಿಲ್ಲ. ಇಂದು ಪ್ರಕೃತಿ ವಿಕೋಪ ಆದ ಮೇಲೆ ನಮಗೆ ಪ್ರಕೃತಿ ಮಹತ್ವ ತಿಳಿಯುತ್ತದೆ. ನಮ್ಮ ಬೆಳವಣಿಗೆ ಪರಿಣಾಮದಿಂದಾಗಿ ಇಂದು ಪ್ರಕೃತಿ ವಿಕೋಪ ಉಂಟಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಾದ ವಿಮಲ್ ಬಾಬು ಹೇಳಿದರು.

ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಲ್ಮಕಾರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಕಲ್ಮಕಾರಿನಲ್ಲಿ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಎನ್.ಎಸ್.ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕೊಡ ಮಾಡಿದ 30 ಟ್ರೀ ಗಾರ್ಡ್‌ನ್ನು ಹಣ್ಣಿನ ಗಿಡಗಳಿಗೆ ಅಳವಡಿಸಲಾಯಿತು. ಅಲ್ಲದೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ಮುಖ್ಯಶಿಕ್ಷಕಿ ಮಾಲಿನಿ ಕೆ.ಎಸ್., ಎಸ್‌ಡಿಎಂಸಿ ಅಧ್ಯಕ್ಷೆ ದಿವ್ಯಾ ಮೆದುಮನೆ, ಲಯನ್ಸ್ ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ರಾಮಚಂದ್ರ ಪಳಂಗಾಯ, ಊರಿನ ಹಿರಿಯರಾದ ಉಮೇಶ್ ಬಿಳಿಮಲೆ, ಯಶವಂತ ಬಿಳಿಮಲೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಾದ ರಾಧಾಕೃಷ್ಣ ಬಿಲ್ಲರಮಜಲು, ಗಣೇಶ್ ಭಟ್ ಇದ್ಯಡ್ಕ, ಶಿವಾನಂದ ಬಿಳಿಮಲೆ ಮತ್ತು ದತ್ತಿನಿಧಿ ದಾನಿಗಳಾದ ಧರ್ಮರಾಜ ಕೆಪಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಮಾ ಸುಲೋಚನ್, ಲಯನ್ಸ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಕ್ಲಬ್‌ನ ಸದಸ್ಯರಾದ ಲೋಕೇಶ್ ಬಿ.ಎನ್.,ದೀಪಕ್ ಎಚ್.ಬಿ., ದಿನೇಶ್ ಮೊಗ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net