

ಕುಂದಾಪುರ: ಶಿಕ್ಷಣ ತಜ್ಞ, ರಾಜನೀತಿಜ್ಞ, ಪರಿಸರ ಪ್ರೇಮಿ, ತತ್ವಜ್ಞಾನಿ, ವಿಶ್ವಾತ್ಮಕ ಪ್ರಜ್ಞ, ಚಿಂತಕರಾಗಿ ಕಾವ್ಯದ ಮೂಲಕ ಜಗತ್ತಿಗೆ ಸಾರಿದವರು. ರಾಜಧರ್ಮ, ಯುಗಧರ್ಮ, ಯುದ್ಧಧರ್ಮ, ಕುಲಧರ್ಮಗಳನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಡಾ.ಬಿ.ಬಿ.ಹೆಗ್ಡೆ ಕಾಲೇಜು ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಹೇಳಿದರು. ಮಂಗಳವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ವರ್ತಮಾನಕ್ಕೂ ವಾಲ್ಮೀಕಿ ವಿಚಾರಧಾರೆಗಳು ಪ್ರಸ್ತುತವಾಗಿವೆ. ಅವರ ಮೌಲ್ಯಗಳು ಸಾರ್ವಕಾಲಿಕ ಎಂದರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಉದ್ಘಾಟಿಸಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್, ದಸಂಸ ಭೀಮ ಗರ್ಜನೆ ರಾಜ್ಯಾಧ್ಯಕ್ಷ ಡಾ.ಉದಯ ಕುಮಾರ್ ತಲ್ಲೂರು ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಹಾಸ್ಟೆಲ್ ಮೇಲ್ವಿಚಾರಕಿ ರಾಧಿಕಾರಾಣಿ ನಿರ್ವಹಿಸಿದರು.