ಬಾಗಲಕೋಟೆ: ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಹಳೇ ಸಿದ್ದರಾಮಯ್ಯ ಇದ್ದರೆ ಹುಡುಕಿ ಕೊಡಿ. ಹೊಸ ಸಿದ್ದರಾಮಯ್ಯರಿಗೆ ಆಡಳಿತ ಮಾಡಲು ಆಗುತ್ತಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ವಿವಿಧ ರೈಲ್ವೆ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ (V Somanna), ಸಿದ್ದರಾಮಯ್ಯ ಚಾವಿನೂ ಗೊತ್ತಿಲ್ಲ, ಡಿಕೆಶಿನೂ ಗೊತ್ತಿಲ್ಲ. ನನಗೆ ಗೊತ್ತಿರುವುದು, ಸಿದ್ದರಾಮಯ್ಯ ಮಂತ್ರಿ ಆಗಿದ್ದಾಗ ನಾನು ಮಂತ್ರಿ ಆಗಿದ್ದವನು. ಅವರ ಹತ್ತಿರದಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಹಳೇ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಈ ಸಿದ್ದರಾಮಯ್ಯ ನನಗೆ ಗೊತ್ತಿಲ್ಲ. ಇವತ್ತಿನ ಸಿದ್ದರಾಮಯ್ಯ ಅವರ ಅವ್ಯವಸ್ಥೆಯನ್ನು ಭಗವಂತ ಬಂದರೂ ಕಾಪಾಡಲ್ಲ. ಅವರಿಗೇನಾದರೂ ಇನ್ನೂ ಸ್ವಲ್ಪ ನೈತಿಕತೆ ಇದ್ದರೆ ಕೈಮುಗಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಈ ಸರ್ಕಾರ ಒಂದು ರೀತಿ ಅಸಹ್ಯ ಅನ್ನಿಸುತ್ತಿದೆ. ಸಿದ್ದರಾಮಯ್ಯ ಅವರ ಕಾರ್ಯವೈಖರಿ, ಅನುಭವ, ದೂರದೃಷ್ಟಿ, ಚಿಂತನೆ ಎಲ್ಲವೂ ಮಾಯವಾಗಿದೆ. ಇದೊಂದು ಮಾಯಾಬಜಾರ್ ಸರ್ಕಾರ. ಯಾರ ದಯಾಮರಣ ಅಲ್ಲ, ಏನು ಹೇಳಿದರೂ ಅವರ ತಲೆಗೆ ಹೋಗುವುದಿಲ್ಲ. ಅವರು ಖುರ್ಚಿ ಉಳಿಸಿಕೊಳ್ಳಲು ಕಾತೂರ ಆಗಿದ್ದಾರೆ ವಿನಃ ಸರ್ಕಾರ ನಡೆಸಬೇಕು, ಜನರಿಗೆ ಸ್ಪಂದಿಸಬೇಕು ಯಾವುದು ಇಲ್ಲ. ಹೀಗಾಗಿ ಎರಡ್ಮೂರು ತಿಂಗಳಲ್ಲಿ ಈ ರಾಜ್ಯಕ್ಕೆ ಹೆಚ್ಚಿನ ಗಂಡಾಂತರ ಬರುತ್ತದೆ.
ನಾನು ಸಹ ಐದು ಬಾರಿ ಶಾಸಕ, ಎರಡು ಸಲ ಪರಿಷತ್ ಸದಸ್ಯ ಆರು ಸಲ ಮಂತ್ರಿ ಆಗಿದ್ದೇನೆ. ನೂರಾರು ಕಡೆಗೆ ಹೋಗಿದ್ದೇನೆ. ಈ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ಮನೆ ಕಟ್ಟಲು ಆಗಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೊಟ್ಟಿರುವ ಮನೆಗಳು ಇಲ್ಲವಾಗಿವೆ. ಕೊಟ್ಟಿರುವ ದುಡ್ಡು ಏನಾಯಿತು ಗೊತ್ತಿಲ್ಲ. ಸಿದ್ದರಾಮಯ್ಯ ಈ ಮಟ್ಟದ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದರೆ ಇದಕ್ಕಿಂತ ತಲೆಬಾಗಿಸುವ ಕೆಲಸ ಮತ್ತೊಂದಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ವಾಗ್ದಾಳಿ ನಡೆಸಿದ್ದಾರೆ.
ತಂಗಿಯ Instagram ರೀಲ್ಗೆ ಕಮೆಂಟ್ ಮಾಡಿದ ಯುವಕನಿಗೆ ಬರ್ಬರವಾಗಿ ಇರಿದ ಅಣ್ಣ
ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ, ಸಂತೋಷ ತರಲಿ; ಬಿಡುಗಡೆ ಬಳಿಕ ನಟ Darshan ಮೊದಲ ಪೋಸ್ಟ್