ರಾಯ್ಪುರ: ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹವು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಗೂ ಇನ್ನಿತರೆ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಮುಂದೊಂದು ದಿನ ತೊಂದರೆಗೆ ಒಳಗಾಗುತ್ತೇವೆ ಎಂದು ತಿಳಿದಿದ್ದರೂ ಸಹ ಯುವಕರು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತಿರುವ ಸಂಗತಿ ಆಘಾತಕಾರಿಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಮೆಂಟ್ ಒಂದು ಯುವಕನ ಜೀವಕ್ಕೆ ಅಪಾಯ ತಂದಿರುವ ಘಟನೆ ನಡೆದಿದೆ.
ಛತ್ತೀಸ್ಗಢದ ಧಮ್ತಾರಿಯ ಜಿಲ್ಲೆಯ ಅರ್ಜುನಿ ಎಂಬ ಪ್ರದೇಶದಲ್ಲಿ ಯುವಕನೋರ್ವ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಆಕ್ಷೇಪಾರ್ಹ ಕಮೆಂಟ್ ಹಾಕಿದ್ದಾನೆ ಎಂದು ಆರೋಪಿಸಿ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹುಡುಗಿಯೊಬ್ಬಳು ಪೋಸ್ಟ್ ಮಾಡಿದ ರೀಲ್‌ಗೆ ಸಂತ್ರಸ್ತ ಸಾಗರ್ ಎಂಬಾತ ಐಸೆ ಕಾ ಎಂದು ಕಮೆಂಟ್ ಹಾಕಿದ್ದ. ಇದನ್ನು ನೋಡಿದ ಹುಡುಗಿಯ ಸಹೋದರ ಹರ್ಷ್ ಸಾಹು ಆಕ್ಷೇಪಾರ್ಹವೆಂದು ಭಾವಿಸಿ ಸಂತ್ರಸ್ತನನ್ನು ಸಂಪರ್ಕಿಸಿ ಭೇಟಿಯಾಗುವಂತೆ ಸೂಚಿಸಿದ್ದಾನೆ.
ಹುಡುಗಿಯ ಸಹೋದರ ಹೇಳಿದ ಜಾಗಕ್ಕೆ ಸಾಗರ್ ಬಂದಿದ್ದು, ಈ ವೇಳೆ ಹರ್ಷ್ ಮತ್ತು ಆತನ ಸ್ನೇಹಿತರು ಸಾಗರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ಧಾರೆ. ಸಾಗರ್ನ ಎದೆ, ಸೊಂಟ ಮತ್ತು ಕೈಗಳಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದು, ಘಟನೆ ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ, ಸಂತೋಷ ತರಲಿ; ಬಿಡುಗಡೆ ಬಳಿಕ ನಟ Darshan ಮೊದಲ ಪೋಸ್ಟ್
ಅಸಂಬದ್ಧ ಪ್ರಶ್ನೆ ಕೇಳಿದ ಯೂಟ್ಯೂಬರ್ನನ್ನು ಹಿಗ್ಗಾಮುಗ್ಗಾ ಥಳಿಸಿದ ನಾಗಾಸಾಧು; Video Viral