ಪಡುಬಿದ್ರಿ ಸಂಘಕ್ಕೆ ಉತ್ತರಾಖಂಡ ಸಚಿವ ಭೇಟಿ

pdb (2)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಉತ್ತರಾಖಂಡದಲ್ಲಿ 2017ರಲ್ಲೇ ಸಹಕಾರಿ ಸಂಘಗಳನ್ನು ಮಲ್ಟಿ ಪರ್ಪಸ್ ಸೊಸೈಟಿಗಳಾಗಿ ಪರಿವರ್ತಿಸಲಾಗಿದೆ. ಸಹಕಾರಿ ಸಂಘಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಾಗಿದೆ ಎಂದು ಉತ್ತರಾಖಂಡ ಸಚಿವ ಡಾ.ಧನ್‌ಸಿಂಗ್ ರಾವತ್ ಹೇಳಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಶನಿವಾರ ಭೇಟಿ ನೀಡಿದ ಅವರು ಸಂಘದ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ.ಸುಧೀರ್‌ಕುಮಾರ್ ಸಚಿವರನ್ನು ಅಭಿನಂದಿಸಿದರು. ಉತ್ತರಾಖಂಡ ಸರ್ಕಾರದ ಸಂಸ್ಕೃತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ದೀಪಕ್ ಕುಮಾರ್, ಸಂಸ್ಕೃತ ಪೀಠದ ಕುಲಪತಿ ಪ್ರೊ. ಮಹೇಶ್‌ಚಂದ್ರ ಶಾಸ್ತ್ರಿ, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್, ಸಹಾಯಕ ನಿಬಂಧಕ ಸುಧೀರ್ ಕುಮಾರ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ, ಜಿತೇಂದ್ರ ಫುರ್ಟಾಡೋ, ಕೃಷ್ಣ ಬಂಗೇರ, ರಾಜಾರಾಮ, ಮಾಧವ ಆಚಾರ್ಯ, ರೋಹಿಣಿ ಎ., ಸೊಸೈಟಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಉತ್ತರಾಖಂಡ ಸರ್ಕಾರವು ಕರ್ನಾಟಕದ ತೆಂಗು ಬೆಳೆ ಹಾಗೂ ಅಲ್ಲಿನ ಮಿಲ್ಲೆಟ್ ಕುರಿತು ಜಂಟಿ ಯೋಜನೆ ರೂಪಿಸಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದೊಂದಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಮುಂದುವರಿಯಲು ಬಯಸಿದೆ. -ಡಾ.ಧನ್‌ಸಿಂಗ್ ರಾವತ್, ಉತ್ತರಾಖಂಡ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net