ಸಾಫ್ಟ್ ಸ್ಕಿಲ್ ತರಬೇತಿ ಸಮಾರೋಪ

gan
Published on

ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ಗಣಕಯಂತ್ರ ವಿಭಾಗ ಮತ್ತು ಪ್ಲೇಸ್ಮೆಂಟ್ ಸೆಲ್ ವತಿಯಿಂದ ವ್ಯಾಜಿಕ್ ಬಸ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಐದು ದಿನಗಳ ಸಾಫ್ಟ್ ಸ್ಕಿಲ್ ತರಬೇತಿಯ ಸಮಾರೋಪ ಸಮಾರಂಭ ಶುಕ್ರವಾರ ಕಾಲೇಜಿನ ರಾಧಾ ಭಾಯಿ ಸಭಾಂಗಣದಲ್ಲಿ ನಡೆಯಿತು.

ಕಾಲೇಜು ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಗಣಕಯಂತ್ರ ವಿಭಾಗ ಮುಖ್ಯಸ್ಥ ಪ್ರೊ.ಗಣೇಶ್ ಕೆ., ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ವಿಜಯಲಕ್ಷ್ಮೀ ಎನ್.ಶೆಟ್ಟಿ, ಪ್ಲೇಸ್ಮೆಂಟ್ ಸೆಲ್‌ನ ಸಂಚಾಲಕ ರಾಜೇಂದ್ರ ಹೋಬಳಿದಾರ್, ಸಂಪನ್ಮೂಲ ವ್ಯಕಿಗಳಾಗಿದ್ದ ವ್ಯಾಜಿಕ್ ಬಸ್ ಫೌಂಡೇಶನ್‌ನ ನವೀನ್, ಭಾರ್ಗವ್ ಮತ್ತು ರಾಹುಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರಶ್ಮಿತಾ ವಿ. ಸ್ವಾಗತಿಸಿದರು. ಲತಿಕಾ ಡಿ.ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net