ಜವಾರಿ ಹುಡುಗನ ಸೈಕಲ್ ಸವಾರಿ ; ದೇವು ನಟಿಸಿರುವ ಉತ್ತರ ಕರ್ನಾಟಕದ ಸೊಗಡಿನ ಚಿತ್ರ

Cycle Savari_(172)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದೇವು ಕೆ. ಅಂಬಿಕ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರ ‘ಸೈಕಲ್ ಸವಾರಿ’. ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ದೇವುಗೆ ದೀಕ್ಷಾ ಬೀಸೆ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಮಾಡಲಾಯಿತು.

ಹಳ್ಳಿಯಲ್ಲಿ ಮಿಠಾಯಿ ಮಾರುವ ಬಡ ಯುವಕನನ್ನು ಶ್ರೀಮಂತ ಮನೆತನದ ಹುಡುಗಿ ಪ್ರೀತಿಸುತ್ತಾಳೆ. ನಂತರ ಇಬ್ಬರ ಬದುಕಿನಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದೇ ‘ಸೈಕಲ್ ಸವಾರಿ’ ಒನ್‌ಲೈನ್. ದೇವು, ‘ವಿಜಯಪುರದಲ್ಲಿ ಸ್ಟುಡಿಯೋ ಆರಂಭಿಸಿ, ಕೆಲ ಕಿರುಚಿತ್ರಗಳನ್ನು ಮಾಡಿದ್ದೇನೆ. ಅದೇ ರೀತಿ ಎರಡು ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರ ಮಾಡಲು ಕರೊನಾ ಸಮಯದಲ್ಲಿ ಕಥೆ ಬರೆದೆ. ಕಡ್ಡಿ ಹೋಗಿ ಗುಡ್ಡ ಆಯಿತು ಎಂಬಂತೆ, ಅದೀಗ ಸಿನಿಮಾ ಆಗಿದೆ’ ಎಂದು ಮಾಹಿತಿ ನೀಡಿದರು.

ನಾಯಕಿ ದೀಕ್ಷಾ, ‘ನಾನು ಭರತನಾಟ್ಯ ಡಾನ್ಸರ್. ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಆಸೆಯಿತ್ತು. ಅದು ಈ ಚಿತ್ರದಿಂದ ಈಡೇರಿದೆ’ ಎಂದು ಹೇಳಿಕೊಂಡರು. ಚಿತ್ರದಲ್ಲಿ ಐದು ಹಾಡುಗಳಿದ್ದು ರೋಹನ್ ಎಸ್. ದೇಸಾಯಿ ಸಂಗೀತ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ದೇವು, ದೀಕ್ಷಾ ಜತೆ ಶಿವಾಜಿ, ಗೀತಾ ರಾಘವೇಂದ್ರ, ಕಾವ್ಯ ತಾರಾಗಣದಲ್ಲಿದ್ದಾರೆ. ಸಿನಿಮಾ ನ. 3ರಂದು ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net