ಕರೊನಾ ಬರದಂತೆ ತಡೆಯಲು ಗಿಡಮೂಲಿಕೆ ಔಷಧ ಸೇವನೆ: ಮಗ ಸಾವು, ಅಪ್ಪನ ಸ್ಥಿತಿ ಗಂಭೀರ

Man Death
Published on

ಉತ್ತರಕನ್ನಡ: ಕರೊನಾ ಬರದಂತೆ ತಡೆಯಬಹುದು ಎಂದು ಗಿಡಮೂಲಿಕೆ ಔಷಧ ಕುಡಿದು ಮಗ ಸಾವಿಗೀಡಾಗಿ, ತಂದೆ ಅಸ್ವಸ್ಥಗೊಂಡಿರುವ ಘಟನೆ ಶಿರಸಿ ತಾಕೂಕಿನ ರಾಮನಬೈಲಿನಲ್ಲಿ ನಡೆದಿದೆ.

ಫ್ರಾನ್ಸಿಸ್ ರೇಘೋ(42) ಮೃತ ಮಗ. ಆತನ ತಂದೆ ನೆಕ್ಲಾಂ ಅಂಥೋನಿ ( 70) ಗಂಭೀರವಾಗಿದ್ದು, ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ.

ಕರೊನಾ ಭೀತಿ ಹಿನ್ನೆಲೆಯಲ್ಲಿ ಸೋಂಕು ಬರದಂತೆ ತಡೆಯಬಹುದು ಎಂದು ನಂಬಿ ಅಪ್ಪ-ಮಗ ಗಿಡಮೂಲಿಕೆ ಔಷಧವನ್ನು ಸೇವಿಸಿದ್ದಾರೆ. ಬಳಿಕ ಔಷಧದ ಅಡ್ಡ ಪರಿಣಾಮದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಶಿರಸಿ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net