More

    8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಕೊಲಂಬಿಯಾ: ಸುಮಾರು ಎಂಟು ವರ್ಷಗಳಿಂದ ಪೊಲೀಸರ ಕೈಯಲ್ಲಿ ಭೇದಿಸಲಾಗದ ಪ್ರಕರಣವನ್ನು ಕೇವಲ ಆರು ವರ್ಷದ ಬಾಲಕ ಕ್ಷಣ ಮಾತ್ರದಲ್ಲಿ ಪ್ರಕರಣಕ್ಕೆ ತೆರೆ ಎಳೆಯುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾನೆ.

    ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ಬಾಲಕನ ಹೆಸರು ನಾಕ್ಸ್​ ಬ್ರೆವೆರ್​. ಅಮೆರಿಕದ ಸೌಥ್​ ಕರೊಲಿನಾದ ಜಾನ್ಸ್​ ದ್ವೀಪದ ನಿವಾಸಿ. ಕರೊನಾ ವೈರಸ್​ನಿಂದ ಹೇರಲಾಗಿದ್ದ ಲಾಕ್​ಡೌನ್​ ಸಮಯವನ್ನು ಕಳೆಯಲು ಮ್ಯಾಗ್ನೆಟ್​ ಫಿಶಿಂಗ್​ ಆರಂಭಿಸಿದ ಬ್ರೆವೆರ್​, ಕೆರೆಯ​ ನೀರಿನ ತಳದಲ್ಲಿರುವ ಲೋಹದ ವಸ್ತುಗಳನ್ನು ಹುಡುಕಾಡಲು ಶುರುಮಾಡಿದ ಎಂದು ಕುಟುಂಬದವರು ತಿಳಿಸಿದ್ದಾರೆ.

    ಒಂದು ದಿನ ತನ್ನ ಕುಟುಂಬದೊಂದಿಗೆ ವೈಟ್ನಿ ಕೆರೆಗೆ ತೆರಳಿದ ಬ್ರೆವರ್, ಮ್ಯಾಗ್ನೆಟಿಕ್​ ಫಿಶಿಂಗ್​ ಆರಂಭಿಸುತ್ತಾನೆ. ಒಮ್ಮೆ ನೀರಿಗೆ ಎಸೆದ ಮ್ಯಾಗ್ನೆಟ್ ಭದ್ರವಾಗಿ ಯಾವುದೋ ಭಾರವಾದ ವಸ್ತುವಿಗೆ ಅಂಟಿಕೊಂಡಂತೆ ಭಾಸವಾಗುತ್ತದೆ. ನಂತರ ಸಮೀಪದಲ್ಲಿದ್ದ ಜನರ ಸಹಾಯದಿಂದ ಮ್ಯಾಗ್ನೆಟ್​ ಅನ್ನು ಮೇಲಕ್ಕೆ ಎಳೆಯುತ್ತಾರೆ. ಈ ವೇಳೆ ಬೀಗ ಹಾಕಿದ ಒಂದು ಲೋಹದ ಬಾಕ್ಸ್​ ಪತ್ತೆಯಾಗುತ್ತದೆ. ತಕ್ಷಣ ಅದನ್ನು ತೆರೆದಾಗ ಅದರಲ್ಲಿದ್ದ ಜ್ಯುವೆಲ್ಲರಿ, ಕ್ರೆಡಿಟ್​ ಕಾರ್ಡ್​ ಮತ್ತು ಬ್ಯಾಂಕ್​ ಚೆಕ್​ಬುಕ್​ ನೋಡಿ ಎಲ್ಲರೂ ದಂಗಾಗುತ್ತಾರೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ಈ ವೇಳೆ ನಾಕ್ಸ್​ ಬ್ರೆವರ್​ ತಂದೆ ಜೊನಾಥನ್​ ಬ್ರೆವೆರ್​ ಸ್ಥಳೀಯ ಪೊಲೀಸ್​ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸುತ್ತಾರೆ. ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆ ವಸ್ತುಗಳು ಕರೆಯಿಂದಾಚೆಗೆ ವಾಸಿಸುವ ಮಹಿಳೆಯೊಬ್ಬರಿಗೆ ಸೇರಿದ್ದು ಎಂದು ತಿಳಿಯುತ್ತದೆ. ಬರೋಬ್ಬರಿ 8 ವರ್ಷಗಳ ಹಿಂದೆ ಕಳುವಾಗಿದ್ದರ ಬಗ್ಗೆಯೂ ಆಕೆ ದೂರು ನೀಡಿರುತ್ತಾಳೆ.

    ದರೋಡೆ ಮಾಡಿದವರು ಬಾಕ್ಸ್​ನಿಂದ ಈಗಾಗಲೇ ಬೆಲೆಬಾಳುವ ವಸ್ತಗಳನ್ನೆಲ್ಲಾ ತೆಗೆದುಕೊಂಡು ಕೆಲ ವಸ್ತುಗಳನ್ನು ಹಾಗೇ ಬಿಟ್ಟು ನೀರಿಗೆ ಎಸೆದಿರುತ್ತಾರೆ. ಸದ್ಯ ಸಿಕ್ಕಂತಹ ವಸ್ತುಗಳನ್ನು ಬ್ರೆಸ್ಲೆಟ್​ ಸಹಾಯದಿಂದ ಆಕೆಗೆ ಮರಳಿಸಿದ್ದು, ಆಕೆಯೂ ಸಹ ಬಾಲಕನನ್ನು ತಬ್ಬಿಕೊಂಡು ಧನ್ಯವಾದ ತಿಳಿಸಿದಳು ಎನ್ನುತ್ತಾರೆ ಜೊನಾಥನ್​ ಬ್ರೆವರ್​. (ಏಜೆನ್ಸೀಸ್​)

    ಇದನ್ನೂ ಓದಿ: ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್​…!

    ಪಾಕ್​ ವಿಮಾನ ದುರಂತದಲ್ಲಿ 97 ಮಂದಿ ಸಾವಿಗೀಡಾದ್ರೂ ಇಬ್ಬರು ಮಾತ್ರ ಬದುಕುಳಿದಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts