More

    ಬೆರಳಚ್ಚಿನಿಂದ ಸಿಕ್ಕಿಬಿದ್ದ ದರೋಡೆ ಪ್ರಕರಣದ ಆರೋಪಿ

    ಶಿವಮೊಗ್ಗ: ದರೋಡೆ ಪ್ರಕರಣದಲ್ಲಿ ಹಲವು ವರ್ಷಗಳಿಂದ ನ್ಯಾಯಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಮಂಗಳವಾರ ರಾತ್ರಿ ಬೆರಳಚ್ಚಿನಿಂದ ಸಿಕ್ಕಿಬಿದ್ದಿದ್ದಾನೆ. ರಾತ್ರಿ ಗಸ್ತು ವೇಳೆ ಅನುಮಾನಾಸ್ಪದ ವ್ಯಕ್ತಿಯ ಬೆರಳಚ್ಚು ಪಡೆದು ಪರಿಶೀಲಿಸಿದಾಗ ಅಪರಾಧ ಹಿನ್ನೆಲೆ ಪತ್ತೆಯಾಗಿದ್ದು ಆತನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ದರೋಡೆ ಪ್ರಕರಣದ ಆರೋಪಿ ನವೀನ್ ನಾಯ್ಕ ಬಂಧಿತ. ಈತ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ. ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಬಂದಿದ್ದ ಈತ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ.
    ದೊಡ್ಡಪೇಟೆ ಠಾಣೆ ಪೇದೆ ಗಂಗಪ್ಪ ತುಂಗಲ್ ಅವರು ಮಂಗಳವಾರ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದರು. ಎಂಸಿಸಿಟಿಎನ್‌ಎಸ್(ಮೊಬೈಲ್ ಕ್ರೈಮ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಂ) ತಂತ್ರಾಂಶದ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡಿದಾಗ ನವೀನ್ ನಾಯ್ಕನಿಗೆ ಅಪರಾಧ ಹಿನ್ನೆಲೆ ಇರುವುದು ದೃಢಪಟ್ಟಿದೆ.
    ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣವೊಂದರಲ್ಲಿ ನವೀನ್ ನಾಯ್ಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಅನ್ನುವುದು ತಿಳಿದುಬಂದಿದೆ. ಅಲ್ಲದೆ ಆತನ ವಿರುದ್ಧ ವಾರಂಟ್ ಕೂಡ ಜಾರಿಯಾಗಿತ್ತು. ಕೂಡಲೆ ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೇದೆ ಗಂಗಪ್ಪ ತುಂಗಲ್ ಅವರ ಉತ್ತಮ ಕಾರ್ಯವನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts