

Woman fall in Love : ಪ್ರೀತಿಗೆ ವಯಸ್ಸಿಲ್ಲ ಎಂದು ಹೇಳಲಾಗುತ್ತದೆ. ಈ ಪ್ರೀತಿ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಸಂಭವಿಸಬಹುದು. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಇಲ್ಲಿನ ಮಧ್ಯವಯಸ್ಕ ಮಹಿಳೆಯೊಬ್ಬಳು 18 ವರ್ಷದ ಹುಡುಗನನ್ನು ಪ್ರೀತಿಸುವ ಮೂಲಕ ಸುದ್ದಿಯಲ್ಲಿದ್ದಾಳೆ. ಅಚ್ಚರಿ ಸಂಗತಿ ಏನೆಂದರೆ, ಆ ಹುಡುಗನು ಕೂಡ ವಯಸ್ಸಿನಲ್ಲಿ ತನಗಿಂತ ಮೂರು ಪಟ್ಟು ಹಿರಿಯಳಾಗಿರುವ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದಾನೆ.
ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ, ಮಹಿಳೆಗೆ ನಾಲ್ಕು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯು ಕೂಡ ಆಗಿದೆ. ತಮ್ಮ ತಾಯಿ ಹುಡಗನನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿದ ನಂತರ ಮಕ್ಕಳೆಲ್ಲರು ಅಕೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಆದಾಗ್ಯೂ, ಆಕೆ ಮಾತ್ರ ತನ್ನ ಸಂಬಂಧವನ್ನು ಮುಂದುವರಿಸಿದ್ದಾಳೆ.
ಉತ್ತರ ಪ್ರದೇಶದ ಸಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕುಕ್ಕೆ ಪ್ರದೇಶದ ಗ್ರಾಮವೊಂದರಲ್ಲಿ ವಾಸಿಸುತ್ತಿರುವ 51 ವರ್ಷದ ಮಹಿಳೆ ತನ್ನ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಇನ್ನೊಂದು ಗ್ರಾಮದ 18 ವರ್ಷದ ಹುಡುಗನೊಂದಿಗೆ ಪರಿಚಯವಾಯಿತು. ಕ್ರಮೇಣ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತು. ಇಬ್ಬರೂ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದರು.
18 ವರ್ಷದ ಹುಡುಗ ಮಹಿಳೆಯ ಮನೆಗೂ ಹೋಗಲಾರಂಭಿಸಿದ. ಇಬ್ಬರ ನಡುವಿನ ಪ್ರೀತಿಯ ವಿಚಾರ ತಿಳಿದ ಮಹಿಳೆಯ ಮಕ್ಕಳು ತಾಯಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಹುಡುಗನಿಗೆ ಬೆದರಿಕೆ ಸಹ ಹಾಕಿದರು. ಇಬ್ಬರು ನಿಮ್ಮ ಸಂಬಂಧವನ್ನು ಕೊನೆಗೊಳಿಸಿ ಎಂದು ಒತ್ತಾಯ ಮಾಡಿದರು. ಆದರೂ ಇಬ್ಬರೂ ಭೇಟಿಯಾಗುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಇಬ್ಬರೂ ಊರ ಹೊರಗಿನ ಹೊಲಗಳಲ್ಲಿ ಭೇಟಿಯಾಗತೊಡಗಿದರು. ಈ ವಿಚಾರ ಗೊತ್ತಾಗಿ ಮಕ್ಕಳು ತಾಯಿಯ ಮೇಲೆ ನಿಗಾ ಇಡತೊಡಗಿದರು. ಒಂದು ದಿನ, ಮಹಿಳೆ ತನ್ನ ಯುವ ಪ್ರೇಮಿಯೊಂದಿಗೆ ಓಡಿಹೋದಳು. ತಾಯಿ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಗೊತ್ತಾಗಿ ಆಕೆಯ ಹಿರಿಯ ಮಗಳು ಪೊಲೀಸರ ನೆರವಿನಿಂದ ಹುಡುಕಾಟ ಆರಂಭಿಸಿದಳು.
ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆ ಮತ್ತು ಆಕೆಯ ಯುವ ಪ್ರಿಯಕರನ ಹುಡುಕಾಡಿ, ಕೊನೆಗೂ ಪತ್ತೆಹಚ್ಚಿದರು. ಇಬ್ಬರನ್ನು ಠಾಣೆಯ ಕರೆತಂದರು. ಮನೆಯವರು ಇಬ್ಬರ ಸಂಬಂಧ ಬೇಡವೆಂದರೂ ಅವರಿಬ್ಬರು ಮಾತ್ರ ಒಬ್ಬರೊನ್ನೊಬ್ಬರನ್ನು ಬಿಟ್ಟಿರಲು ಒಪ್ಪುತ್ತಿಲ್ಲ. ಸದ್ಯ ಇಬ್ಬರನ್ನು ಅವರವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್)