ಅತಿಯಾಗಿ ಅರಿಶಿನ ಬಳಸುವುದು ಸೇಫಾ?; ಆರೋಗ್ಯಕರವಾಗಿರಲು ದಿನಕ್ಕೆ ಎಷ್ಟು ಬಳಸಬೇಕು.. ಮಾಹಿತಿ ಇಲ್ಲಿದೆ

Untitled-design-2024-09-16T200236.984
Published on

ಅರಿಶಿನ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬ ಖ್ಯಾತಿ ಪಡೆದಿದೆ. ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ದೈನಂದಿನ ಆಹಾರದಲ್ಲಿ ಉತ್ತಮ ಆರೋಗ್ಯಕ್ಕೆಂದು ಅರಿಶಿನವನ್ನು ಬಳಸುಉವುದ ರೂಢಿಯಲ್ಲಿದೆ. ಆದರೆ ಅರಿಶಿನ ಬಳಸುವುದು ಸುರಕ್ಷಿತವೇ..? ಅಗತ್ಯಕ್ಕಿಂತ ಹೆಚ್ಚಾಗಿ ಅರಿಶಿನ ಬಳಸುವುದು ಆರೋಗ್ಯಕರವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇದನ್ನು ಓದಿ: ತುಪ್ಪದ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು?; ಇದು ತೂಕ ಇಳಿಕೆಗೆ ಅನುಸರಿಸುತ್ತಿರುವ ಸದ್ಯದ​ ಟ್ರೆಂಡ್​ .. ಅತಿಯಾದ ಅರಿಶಿನ ಬಳಕೆಯಿಂದಾಗುವ ಸಮಸ್ಯೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಜೀರ್ಣಕಾರಿ ಸಮಸ್ಯೆ: ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ಉಂಟಾಗುವ ಅನೇಕ ಅಡ್ಡಪರಿಣಾಮಗಳಲ್ಲಿ ಜೀರ್ಣಕಾರಿ ಸಮಸ್ಯೆಯು ಒಂದಾಗಿದೆ. ಇದು ಹೊಟ್ಟೆಯ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್, ಆಸಿಡ್ ರಿಫ್ಲಕ್ಸ್ ಮತ್ತು ಹಳದಿ ಮಲ ಹೀಗೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಯನ್ನುಂಟು ಮಾಡುತ್ತದೆ.
  • ಚರ್ಮದಲ್ಲಿ ದದ್ದುಗಳು: ಸಾಮಾನ್ಯವಾಗಿ ಅರಿಶಿನವನ್ನು ಮುಖದ ಮತ್ತು ನೆತ್ತಿಯ ಮೇಲೆ ಬಳಸುತ್ತೇವೆ. ಕೂದಲು ಉತ್ತಮವಾಗಿ ಬೆಳೆಯಲು ಹಾಗೂ ಚರ್ಮದಲ್ಲಿನ ಸೋಂಕು ಹೋಗಲಾಡಿಸಲು ಬಳಸುತ್ತೇವೆ. ಆದರೆ ಅಧ್ಯಯನವೊಂದು ಅರಿಶಿನ ಬಳಕೆಯು ಚರ್ಮದಲ್ಲಿ ದದ್ದುಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಅರಿಶಿನ ಅಥವಾ ಕರ್ಕ್ಯುಮಿನ್ ಹೊಂದಿರುವ ಉತ್ಪನ್ನಗಳು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ತಜ್ಞರ ಸಲಹೆ ಪಡೆದು ಬಳಿಕ ಉಪಯೋಗಿಸಿ.
  • ರಕ್ತಸ್ರಾವದ ಹೆಚ್ಚಳ: ಅರಿಶಿನವು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತ ಪರಿಚಲನೆಯನ್ನು ಕ್ರಮಬದ್ಧಗೊಳಿಸಲು ಅಗತ್ಯವಾದ ಕ್ಯಾಲ್ಸಿಯಂ ಸಿಗ್ನಲಿಂಗ್ ಮಾರ್ಗವನ್ನು ನೇರವಾಗಿ ನಿರ್ಬಂಧಿಸುತ್ತದೆ. ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಮೂಗು, ವಸಡು ರಕ್ತಸ್ರಾವ ಮತ್ತು ಮಲ ಅಥವಾ ಮೂತ್ರದಲ್ಲಿ ರಕ್ತವನ್ನು ಕಾಣುವುದು ಅರಿಶಿನ ಸೇವನೆಯ ಅಡ್ಡಪರಿಣಾಮವಾಗಿರಬಹುದು.
  • ರಕ್ತದಲ್ಲಿನ ಸಕ್ಕರೆಮಟ್ಟ ಹಠಾತ್​​ ಕುಸಿತ: ಟೈಪ್ 2 ಡಯಾಬಿಟಿಸ್ ಇರುವವರಿಗೆ ಅರಿಶಿನವು ರಕ್ತದಲ್ಲಿನ ಅಧಿಕ ಸಕ್ಕರೆಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಅರಿಶಿನ ಬಳಸುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು.
  • ಲಿವರ್​ಗೆ ಹಾನಿ: ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್, ಅಥವಾ ದಿನಕ್ಕೆ 250-1,800 ಮಿ.ಗ್ರಾಂ ನಡುವೆ ಅರಿಶಿನ ಉಪಯೋಗಿಸಿದರೆ ಯಕೃತ್ತಿಗೆ ಗಂಭೀರ ಹಾನಿಯಾಗಬಹುದು. ಜಾಂಡಿಸ್​​, ಹೊಟ್ಟೆ ನೋವು, ವಾಕರಿಕೆ ಮತ್ತು ಕಪ್ಪು ಮೂತ್ರವು ಹಾನಿಗೊಳಗಾದ ಯಕೃತ್ತಿನ ಕೆಲವು ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ತಕ್ಷನ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಿರುತ್ತದೆ.

ಎಷ್ಟು ಅರಿಶಿನ ಬಳಸುವುದು ಸೇಫ್​​​: ಅಧ್ಯಯನಗಳ ಪ್ರಕಾರ ದಿನಕ್ಕೆ 3 ಗ್ರಾಂ ಅರಿಶಿನ ಬಳಸುವುದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. 8 ಗ್ರಾಂಗಳಷ್ಟು ಕರ್ಕ್ಯುಮಿನ್ ಹೊಂದಿರುವ ಉತ್ಪನ್ನಗಳನ್ನು ಸುಮಾರು ಎರಡು ತಿಂಗಳವರೆಗೆ ಬಳಸುವುದು ಆರೋಗ್ಯಕರವೆಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net