

ಬೆನ್ನು ಅಥವಾ ಸೊಂಟ ನೋವಿನ ನಿಯಂತ್ರಣಕ್ಕೆ, ಮೈಯನ್ನು ತಿರುಚಿ ಮಾಡುವ ಆಸನವಾದ ವಕ್ರಾಸನ ಉಪಯುಕ್ತವಾದುದು. ಇದರಿಂದ ಬೆನ್ನಿನ ಅಂಗಗಳು ಪುನಶ್ಚೇತನಗೊಳ್ಳುತ್ತವೆ. ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ದೊರಕುತ್ತದೆ.
ಪ್ರಯೋಜನ : ಬೆನ್ನು ಮತ್ತು ಸೊಂಟ ನೋವುಗಳು, ಕುತ್ತಿಗೆ, ಭುಜ ಮತ್ತು ಕೈಗಳ ನೋವು ನಿವಾರಣೆಯಾಗುತ್ತದೆ. ಮೂತ್ರದೋಷ ಮತ್ತು ಮಧುಮೇಹ ನಿಯಂತ್ರಣವಾಗುತ್ತವೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ: ಮದ್ಯ, ಆಹಾರ ಹೋಂ ಡೆಲಿವರಿ ಹೆಸರಲ್ಲಿ ಧೋಖಾ! ಇಬ್ಬರ ಬಂಧನ
ಮಾಡುವ ಕ್ರಮ : ಕಾರ್ಪೆಟ್ ಮೇಲೆ ಕಲು ಉದ್ದ ಮಾಡಿ ಕೂತುಕೊಳ್ಳುವುದು. ಎರಡೂ ಕೈಗಳನ್ನು ಬಳಸಿ, ಬಲಗಾಲನ್ನು ಎಡಮಂಡಿಯ ಹತ್ತಿರ ಮಡಿಸಬೇಕು. ಬೆನ್ನು, ಕುತ್ತಿಗೆ ನೇರವಾಗಿಸಿ. ಬಲಗೈಯನ್ನು ನೇರ ಚಾಚಿ ಕಣ್ಣುಗಳಿಂದ ಬೆರಳುಗಳನ್ನು ನೋಡುತ್ತಾ ಉಸಿರನ್ನು ಬಿಡುತ್ತಾ ನಿಧಾನವಾಗಿ ಹಿಂದೆ ತೆಗೆದುಕೊಂಡು ಹೋಗುವುದು. ಸೀಟಿನ ಹಿಂದೆ ಕೈ ಊರಿಡಬೇಕು. ಎಡಗೈಯನ್ನು ಬಲಗಾಲಿನ ಪಾದ ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಭುಜಗಳು ಒಂದೇ ಲೈನಿನಲ್ಲಿರುವಂತೆ ಬೆನ್ನನ್ನು ಪೂರ್ತಿ ತಿರುಗಿಸಿಕೊಳ್ಳಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ಹಾಯಾಗಿರುವುದು. ನಂತರ ಬಲಗೈಯನ್ನು ಸಡಿಲಿಸಿ, ಎಡಗೈಯನ್ನು ಸಡಿಲಿಸಿ ಹಂತಹಂತವಾಗಿ ಮೊದಲನೇ ಸ್ಥಿತಿಗೆ ಬರಬೇಕು. ಇದೇ ರೀತಿ ಇನ್ನೊಂದು ಪಾರ್ಶಕ್ಕೆ ಮಾಡುವುದು.
ಹೃದಯದ ಸಮಸ್ಯೆ ಇರುವವರು, ಹರ್ನಿಯಾ ಅಥವಾ ತೀರಾ ಸೊಂಟ-ಬೆನ್ನು ನೋವು ಇರುವವರು ಈ ಆಸನವನ್ನು ಅಭ್ಯಾಸ ಮಾಡಬಾರದು.