More

    ನೀರಿನ ಮೇಲೆ ಶೀರ್ಷಾಸನ! ಫಿನ್ಲೆಂಡ್​ ಮಹಿಳೆಯ ವಿಭಿನ್ನ ಪ್ರ’ಯೋಗ’!

    ಫಿನ್ಲೆಂಡ್​ : ಯೋಗದ ಬಗ್ಗೆ ವಿಶಿಷ್ಟ ಆಸಕ್ತಿ ಬೆಳೆಸಿಕೊಂಡಿರುವ ಫಿನ್ಲೆಂಡಿನ ಎಸ್ಪೂ ನಿವಾಸಿ ಸಾನ್ನಾ ವಾಲ್ವಾನ್ನೆ ಅವರು ಕೊಳದಲ್ಲಿ ನೀರಿನ ಮೇಲೆ ಶೀರ್ಷಾಸನ ಮಾಡಿ ಗಮನ ಸೆಳೆದಿದ್ದಾರೆ. ಶೀರ್ಷಾಸನದಲ್ಲಿ ತಲೆಯ ಮೇಲೆ ನಿಲ್ಲುವಾಗ, ಗಮನವೆಲ್ಲಾ ಕೇಂದ್ರೀಕೃತವಾಗುವ ಪರಿ ತಮ್ಮನ್ನು ಅದರೆಡೆಗೆ ಸೆಳೆಯುತ್ತದೆ ಎಂದು ಹೇಳಿದ್ದಾರೆ.

    ಸಂಗೀತಗಾರ್ತಿಯಾದ ಸಾನ್ನಾ, ‘ಸಿಂಗ್​ ಅಂಡ್​ ಶೈನ್ ಕಾಯರ್ಸ್’​ ಎಂಬ ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿದ್ದು, ಮಕ್ಕಳಿಗೆ ಸಂಗೀತ ಹೇಳಿಕೊಡುವುದರಲ್ಲಿ ನಿರತರಾಗಿದ್ದಾರೆ. ಸಂಗೀತದಂತೆಯೇ ದೇಹ ಮತ್ತು ಆತ್ಮಕ್ಕೆ ಚೈತನ್ಯ ತುಂಬುವ ಯೋಗದ ಬಗ್ಗೆ ಅವರು ವಿಶೇಷ ಅಭಿಮಾನ ಹೊಂದಿದ್ದಾರೆ.

    ಇದನ್ನೂ ಓದಿ: ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

    ಕಳೆದ ಜುಲೈ 27 ರಂದು ರಾತ್ರಿ 8.20 ಕ್ಕೆ ಫಿನ್​ಲೆಂಡಿನ ಲೆಂಪಾದಲ್ಲಿರುವ ಪೈಜಾನೆ ಕೊಳದಲ್ಲಿ ನೀರಿನ ಮೇಲೆ ಶೀರ್ಷಾಸನ ಮಾಡುವ ಪ್ರಯತ್ನ ಮಾಡಿದರು, ಸಾನ್ನಾ. ಶಾಂತವಾದ ವಾತಾವರಣದಲ್ಲಿ ಕೊಳದ ಮಧ್ಯೆ ಪ್ಯಾಡಲ್​ಬೋರ್ಡ್​ ಮೇಲೆ, ಶೀರ್ಷಾಸನ ಮಾಡಿದ ವಿಡಿಯೋವನ್ನು ಅವರ ತಂದೆ ಜಾಕ್ಕೊ ವಾಲ್ವಾನ್ನೆ ಚಿತ್ರೀಕರಿಸಿದ್ದಾರೆ.

    ಚಿಕ್ಕಂದಿನಲ್ಲಿ ಅವರ ತಾಯಿ ಕೆಲವು ಯೋಗಾಸನಗಳನ್ನು ಮಾಡಿಸುತ್ತಿದ್ದರಂತೆ. ಬೆಳೆದ ಹಾಗೆ, ತಮ್ಮ ಹೈಸ್ಕೂಲ್​ ಮತ್ತು ಕಾಲೇಜು ದಿನಗಳಲ್ಲಿ ಸಿದ್ಧ ಯೋಗ, ಅಷ್ಟಾಂಗ ಯೋಗಗಳ ತರಬೇತಿ ಪಡೆದರು. 7 ವರ್ಷ ವಯಸ್ಸಿನಲ್ಲಿ ಅಪ್ಪನಿಂದ ದಿಂಬುಗಳ ಸಹಾಯದಿಂದ ಹೆಡ್​​ಸ್ಟ್ಯಾಂಡ್​ ಮಾಡಲು ಕಲಿತಿದ್ದ ಸಾನ್ನಾ, ದೊಡ್ಡವರಾದ ಮೇಲೆ ಶುದ್ಧ ಪ್ರಕಾರದ ಶೀರ್ಷಾಸನವನ್ನು ಶಿಸ್ತುಬದ್ಧವಾಗಿ ಯೋಗಗುರುಗಳಿಂದ ಕಲಿತು ನಿತ್ಯ ಅಭ್ಯಾಸ ಮಾಡುತ್ತಿದ್ದಾರೆ.

    ಇದನ್ನೂ ಓದಿ: ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

    ಮುಂಬಯಿ ಮೂಲದ ತಮ್ಮ ಪತಿ, ಮೈಸೂರಿನ ಯೋಗಶಿಕ್ಷಕಿ ಪ್ರತಿಮಾ ಗಿರಿಧರ್ ಅವರ ಪರಿಚಯ ಮಾಡಿಸಿದಾಗ, ತಮ್ಮ ನಿಜವಾದ ಯೋಗ ಪ್ರಯಾಣ ಆರಂಭವಾಯಿತು ಎನ್ನುತ್ತಾರೆ ಸಾನ್ನಾ. ಕಳೆದ ಐದಾರು ವರ್ಷಗಳಿಂದ ವರ್ಷಕ್ಕೊಮ್ಮೆ ಭಾರತಕ್ಕೆ ಬಂದು, ಪ್ರತಿಮಾ ಅವರ ಯೋಗ ಶಿಬಿರದಲ್ಲಿ ಭಾಗವಹಿಸುವುದು ಸಾನ್ನಾಗೆ ರೂಢಿಯಾಗಿಬಿಟ್ಟಿದೆ.

    ಆನ್​ಲೈನ್​ ಕೆಲಸದಿಂದ ಕುತ್ತಿಗೆ ನೋವೇ? ಈ ಯೋಗಾಸನ ಮಾಡಿ!

    ಭಾರತಕ್ಕೆ ಅಮೆರಿಕದ ಮಿಷನ್ ಡೈರೆಕ್ಟರ್​ ಆಗಿ ವೀಣಾ ರೆಡ್ಡಿ ಕಾರ್ಯಾರಂಭ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts