ಕಾನ್ಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಂಗಗಳ ಕಾಟ ತಪ್ಪಿಸಲು ಲಂಗೂರ್​ ಬಳಕೆ!

web langurs
Published on

ಕಾನ್ಪುರ: ಭಾರತ-ಬಾಂಗ್ಲಾ ಟೆಸ್ಟ್​ ವೇಳೆ ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಮಂಗಗಳ ಕಾಟವನ್ನು ತಪ್ಪಿಸುವ ಸಲುವಾಗಿ ಉತ್ತರ ಪ್ರದೇಶ ಕ್ರಿಕೆಟ್​ ಸಂಸ್ಥೆ (ಯುಪಿಸಿಎ) ಲಂಗೂರ್​ಗಳನ್ನು ಬಳಸಿಕೊಂಡಿವೆ.

ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಗಳ ವೇಳೆ ಮಂಗಗಳಿಂದ ತೊಂದರೆ ಎದುರಿಸುವುದು ಈ ಹಿಂದೆ ಸಾಮಾನ್ಯವೆನಿಸಿತ್ತು. ಪ್ರೇಕ್ಷಕರಿಂದ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವ ಮಂಗಗಳು, ಪಂದ್ಯದ ನೇರಪ್ರಸಾರದ ಚಿತ್ರೀಕರಣ ಮಾಡುವಾಗ ಕ್ಯಾಮರಾಮನ್​ಗಳಿಗೂ ತೀವ್ರ ತೊಂದರೆಗಳನ್ನು ನೀಡಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಯುಪಿಸಿಎ ಈ ಬಾರಿ ಮಂಗಗಳನ್ನು ಓಡಿಸಲು ಲಂಗೂರ್​ಗಳನ್ನು ಬಳಸಿಕೊಂಡಿವೆ.

ಮಂಗಗಳ ಭಯವನ್ನು ನಿವಾರಿಸಲು ನಮಗೆ ಲಂಗೂರ್​ಗಳ ಬಳಕೆ ಅಗತ್ಯವಾಗಿತ್ತು ಎಂದು ಸ್ಟೇಡಿಯಂ ನಿರ್ದೇಶಕ ಸಂಜಯ್​ ಕಪೂರ್​ ತಿಳಿಸಿದ್ದಾರೆ. ಲಂಗೂರ್​ಗಳು ಕೋತಿಗಳ ಜಾತಿಗೇ ಸೇರಿದ್ದರೂ, ಕಪ್ಪಾದ ಮೂತಿ ಮತ್ತು ಉದ್ದನೆಯ ಬಾಲಗಳನ್ನು ಹೊಂದಿರುತ್ತವೆ. ಲಂಗೂರ್​ಗಳಿಗೆ ಮಂಗಗಳು ಹೆದರುವುದರಿಂದ ಅವುಗಳ ಹತ್ತಿರಕ್ಕೆ ಹೋಗುವುದಿಲ್ಲ. ಹೀಗಾಗಿ ಮಂಗಗಳನ್ನು ಓಡಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net