ಬಾಕ್ಸಿಂಗ್​ನಲ್ಲಿ ಸ್ಕೋರಿಂಗ್​ಗೆ ಕೃತಕ ಬುದ್ಧಮತ್ತೆ ಬಳಕೆ! ಅಂಕ ಪದ್ಧತಿಯಲ್ಲಿ ಪಾರದರ್ಶಕತೆ ತರಲು ಹೊಸ ಯೋಜನೆ

web box
Published on

ನವದೆಹಲಿ: ಬಾಕ್ಸಿಂಗ್​ ಪಂದ್ಯಗಳಲ್ಲಿ ಹೆಚ್ಚಿನ ಸಮಯಗಳಲ್ಲಿ ರೆಫ್ರಿಗಳು ನೀಡುವ ಅಂಕಗಳು ವಿವಾದಕ್ಕೆ ಗುರಿಯಾಗುತ್ತವೆ ಮತ್ತು ರೆಫ್ರಿಗಳು ಪಕ್ಷಪಾತದಿಂದ ವರ್ತಿಸಿದರು ಎಂಬ ಆರೋಪಗಳೂ ಸಾಮಾನ್ಯ. ಇದನ್ನೆಲ್ಲ ತಪ್ಪಿಸಲು ವಿಶ್ವ ಬಾಕ್ಸಿಂಗ್​ ಸಂಸ್ಥೆ ಈಗ ಹೊಸ ಉಪಾಯವನ್ನು ರೂಪಿಸಿದೆ. ಬಾಕ್ಸಿಂಗ್​ ಪಂದ್ಯಗಳ ಸ್ಕೋರಿಂಗ್​ ಪದ್ಧತಿಗೆ ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸುವ ಮೂಲಕ ವಸ್ತುನಿಷ್ಠತೆ ಮತ್ತು ಪಾರದರ್ಶಕತೆ ತರಲಾಗುವುದು ಎಂದು ವಿಶ್ವ ಬಾಕ್ಸಿಂಗ್​ ಅಧ್ಯಕ್ಷ ಬೋರಿಸ್​ ವಾನ್​ ಡೆರ್​ ವೊರ್ಸ್ಟ್​ ತಿಳಿಸಿದ್ದಾರೆ.

ಬಾಕ್ಸಿಂಗ್​ನಲ್ಲಿ ಪ್ರಸಕ್ತ ಇರುವ ಅಂಕಪದ್ಧತಿಯು ವ್ಯಕ್ತಿನಿಷ್ಠ, ಸಂಕೀರ್ಣ ಮತ್ತು ವಿವಾದಾತ್ಮಕವೆನಿಸಿದೆ. ಕೆಲ ಅನುಮಾನಾಸ್ಪದ ನಿರ್ಧಾರಗಳು ಬಾಕ್ಸರ್​ಗಳು ಮತ್ತು ಅವರ ಬೆಂಬಲಿಗರಿಂದ ಟೀಕೆಗಳಿಗೆ ಗುರಿಯಾಗಿವೆ. ಕಳೆದೊಂದು ದಶಕದಲ್ಲಿ ಈ ಅಂಕ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದ್ದರೂ, ವಿವಾದಗಳು ಕಡಿಮೆಯಾಗಿಲ್ಲ. ಇತ್ತೀಚೆಗೆ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ನಿಶಾಂತ್​ ದೇವ್​ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ್ದರೂ, ಅಂತಿಮವಾಗಿ ಅವರು ಸೋತಿದ್ದಾರೆಂದು ರೆಫ್ರಿ ತೀರ್ಪು ನೀಡಿದ್ದು ವಿವಾದಾತ್ಮಕವೆನಿಸಿತ್ತು.

ಕೃತಕ ಬುದ್ಧಿಮತ್ತೆ (ಎಐ) ಬಳಕೆಯಿಂದ ತೀರ್ಪು ನೀಡುವುದನ್ನು ಹೆಚ್ಚು ಪಾರದರ್ಶಕಗೊಳಿಸಬಹುದು. ನಾವು ಈಗಾಗಲೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ವಾನ್​ ಡರ್​ ವೊರ್ಸ್ಟ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net