8 ವರ್ಷ ಮಗನನ್ನು ಬಂಧಿಸಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ತಾಯಿ!; ಯಾರಿಗೂ ಹೇಳದಂತೆ ಬೆದರಿಕೆ

mom son
Published on

ಅಮೆರಿಕಾ: ತಾಯಿ-ಮಗುವಿನ ಸಂಬಂಧವೆಂದರೆ ಅತ್ಯಂತ ಪವಿತ್ರವಾದುದು. ಆದರೆ ಅಮೆರಿಕಾದ ಮಹಿಳೆಯೊಬ್ಬಳು ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎನ್ನಲಾಗಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿದ್ದ ಹುಡುಗ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಈತನ ಹೆಸರು ರೂಡಿ ಫರಿಯಾಸ್, 17 ವರ್ಷ. ಆತನ ತಾಯಿಯೇ ಈ ಬಗ್ಗೆ ದೂರು ನೀಡಿದ್ದಳು. ಹಲವಾರು ವರ್ಷಗಳ ನಂತರ ರೂಡಿ ಪತ್ತೆಯಾಗಿದ್ದು, ಆತನಿಗೆ 25 ವರ್ಷವಯಸ್ಸಾಗಿದೆ. ಆತನ ತಾಯಿಯೇ ತನ್ನ ಕಾಮಾಸಕ್ತಿ ತೀರಿಸಿಕೊಳ್ಳಲು ಈತನನ್ನು ಬಂಧಿಸಿಟ್ಟಿದ್ದಳು ಎಂಬುದು ಬಯಲಾಗಿದೆ.

ಚರ್ಚ್‌ನ ಹೊರಗೆ ಪತ್ತೆಯಾಗಿರುವ ರೂಡಿ, ಒಂದು ವಾರದ ನಂತರ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾನೆ.  ತಾಯಿ, ಜೆನ್ನಿ ಸಂತಾನಾ, ಅವಳನ್ನು ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ಇಟ್ಟುಕೊಂಡಿದ್ದಳು ಎಂದು ತಿಳಿಸಿದ್ದಾನೆ.

ರೂಡಿ ಪತ್ತೆಯಾದ ನಂತರ, ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ಅಪ್ಪ ಮೃತಪಟ್ಟ ಬಳಿಕ  ನನ್ನ ಗಂಡನಾಗಿ ಇರು ಎಂದು ಒತ್ತಾಯಿಸಿದ್ದಳು. ಅಷ್ಟೇ ಅಲ್ಲ ಯಾರಿಗೂ ಏನನ್ನೂ ಹೇಳದಂತೆ ಬೆದರಿಕೆ ಹಾಕುತ್ತಿದ್ದಳು. ಪೊಲೀಸರಿಗೆ ಏನಾದರೂ ಹೇಳಿದರೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಳು ಎಂದಿದ್ದಾನೆ. ಹೂಸ್ಟನ್ ಪೊಲೀಸರು ಕ್ವಾನೆಲ್ ಎಕ್ಸ್ ಅವರ ಉಪಸ್ಥಿತಿಯಲ್ಲಿ ತಾಯಿ ಜೆನ್ನಿ ಮತ್ತು ರೂಡಿಯನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿದರು. ನಂತರ ಘಟನೆಯ ಸತ್ಯಾಸತ್ಯತೆ ತಿಳಿದು ಪೊಲೀಸರು ತಾಯಿಯನ್ನು ವಶಕ್ಕೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net