

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಹಂತದಲ್ಲಿ ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕವಾಗುವ ರಾಜ್ಯಗಳು ಮತ್ತು ಈ ಸಲದ ಚುನಾವಣಾ ವಿಷಯಗಳು, ಯಾವ ರಾಜ್ಯದಲ್ಲಿ ಯಾರ ಪ್ರಾಬಲ್ಯ ಎಂಬುದರ ಅವಲೋಕನ ಇಲ್ಲಿದೆ.
2016ರ ಚುನಾವಣೆ ಬಲಾಬಲ 306 ಡೊನಾಲ್ಡ್ ಟ್ರಂಪ್ ಗೆಲುವು 23 ರಾಜ್ಯಗಳಲ್ಲಿ ಟ್ರಂಪ್ ಗೆಲುವು 232 ಹಿಲರಿ ಕ್ಲಿಂಟನ್ ಗೆಲುವು 13 ರಾಜ್ಯಗಳಲ್ಲಿ ಹಿಲರಿ ಗೆಲುವು
ಅಧ್ಯಕ್ಷೀಯ ಚುನಾವಣೆಯಲ್ಲಿ 8 ರಾಜ್ಯಗಳು ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿ ಹೆಚ್ಚು ಎಲೆಕ್ಟೋರಲ್ ಕಾಲೇಜ್ ಸ್ಥಾನ ಗಳಿಸಿದವರಿಗೆ ಅಧ್ಯಕ್ಷಪಟ್ಟ ಗಟ್ಟಿ. ಪೆನ್ಸಿಲ್ವೇಲಿನಿಯಾ, ಉತ್ತರ ಕರೊಲಿನಾ, ಅರಿಜೋನಾ, ಮಿಚಿಗನ್, ಜಾರ್ಜಿಯಾ, ಫ್ಲಾರಿಡಾ, ಮಿನ್ನೆಸೋಟಾ, ವಿಸ್ಕಾನ್ಸಿನ್ ಇವೇ ಆ ಎಂಟು ‘ಸ್ವಿಂಗ್ ಸ್ಟೇಟ್ಸ್’. ಈ ರಾಜ್ಯಗಳನ್ನು ‘ಬ್ಯಾಟಲ್ ಗ್ರೌಂಡ್’ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಯಾತ್ರಿ ನಿವಾಸಕ್ಕೆ ಜಾಗ
2016ರಲ್ಲಿ ಈ ರಾಜ್ಯಗಳಲ್ಲಿ ಸಮೀಕ್ಷೆ ಅಂದಾಜು ಬುಡಮೇಲಾಯಿತು. ಡೆಮಾಕ್ರಟಿಕ್ ಪಕ್ಷದ ಹಿಡಿತದಲ್ಲಿದ್ದ ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ಗಳಲ್ಲಿ ಹಿಲರಿ ಕ್ಲಿಂಟನ್ಗೆ ವ್ಯತಿರಿಕ್ತವಾಯಿತು. ಫ್ಲಾರಿಡಾ ಮತ್ತು ಓಹಿಯೊಗಳಲ್ಲಿ ಟ್ರಂಪ್ ಮೇಲುಗೈ ಸಾಧಿಸಿದರು.
ಚುನಾವಣಾ ವಿಷಯ: ನಿರುದ್ಯೋಗ- 2.32 ಕೋಟಿ ಜನರಿಗೆ ಸರ್ಕಾರ ನಿರುದ್ಯೋಗ ಭತ್ಯೆ ನೀಡುತ್ತಿದೆ. ಎರಡನೇ ವಿಶ್ವ ಯುದ್ಧದ ನಂತರ ನಿರುದ್ಯೋಗ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ವಿಷಯವಾಗಿದೆ.
ಆರ್ಥಿಕತೆ- ಕರೊನಾ ಕಾರಣ ದೇಶದ ಆರ್ಥಿಕತೆ ನೆಲಕಚ್ಚಿದೆ. ಉತ್ಪಾದನಾ ವಲಯಗಳು ಸೊರಗಿವೆ. ಜನರಲ್ಲಿ ಖರ್ಚು ಮಾಡುವ ಶಕ್ತಿಯೇ ಇಲ್ಲವಾಗಿರುವುದರಿಂದ ಮಾರುಕಟ್ಟೆ ಭಣಗುಡುತ್ತಿದೆ.
ಕರೊನಾ ನಿಯಂತ್ರಣ- ಅಮೆರಿಕದಲ್ಲಿ ಜುಲೈನಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಸೋಂಕಿನ ಪ್ರಮಾಣ, ನಂತರ ಇಳಿಕೆ ಕಂಡಿತು. ನಂತರ ಲಾಕ್ಡೌನ್ ನಿಯಮ ಸಡಿಲ, ಅಧ್ಯಕ್ಷೀಯ ಚುನಾವಣೆ ಕಾರಣ ಸೆಪ್ಟೆಂಬರ್ ಮಧ್ಯಭಾಗದಿಂದ ಮತ್ತೆ ಏರಿಕೆ ಕಂಡಿದೆ. ಸೋಂಕು ಹತೋಟಿ ಜತೆಗೆ ಔಷಧ ವಿತರಣೆ ಹೊಸ ಅಧ್ಯಕ್ಷರ ಆರಂಭದ ಸವಾಲಾಗಲಿದೆ.
ಡೆಮಾಕ್ರಟಿಕ್ ಬಾಹುಳ್ಯದ ರಾಜ್ಯಗಳು: ನ್ಯೂಯಾರ್ಕ್, ನ್ಯೂಜರ್ಸಿ, ವರ್ವಂಟ್, ಕನೆಕ್ಟಿಕಟ್, ರೋಡ್ ಐಲ್ಯಾಂಡ್, ಇಲಿನಾಯ್್ಸ ವರ್ಜಿನಿಯಾ, ಮೇರಿಲ್ಯಾಂಡ್, ಡೆಲವೇರ್, ಕ್ಯಾಲಿಫೋನಿರ್ಯಾ, ಒರೆಗಾನ್, ವಾಷಿಂಗ್ಟನ್ ಸ್ಟೇಟ್, ಕೊಲೊರಾಡೊ, ನ್ಯೂ ಮೆಕ್ಸಿಕೊ, ಹವಾಯಿ ದ್ವೀಪಗಳು.
ರಿಪಬ್ಲಿಕನ್ಗೆ ಬೆಂಬಲದ ರಾಜ್ಯಗಳು: ಒಕ್ಲಹಾಮ, ಅರ್ಕಾನ್ಸಾಸ್, ಅಲ್ಬಾಮಾ, ಕೆಂಟುಕಿ, ಲೂಸಿಯಾನ, ಟೆನ್ನೆಸ್ಸೀ, ಮಿಸ್ಸಿಸ್ಸಿಪಿ, ದಕ್ಷಿಣ ಕರೊಲಿನಾ, ವ್ಯೂಮಿಂಗ್, ಇದಾಹೊ, ಮಾಂಟಾನಾ, ಉತಾಹ್, ಉತ್ತರ ಮತ್ತು ದಕ್ಷಿಣ ಡಕೋಟಾ, ಕಾನ್ಸಾಸ್, ಮಿಸ್ಸೌರಿ, ಇಂಡಿಯಾನಾ, ಅಲಾಸ್ಕಾ.