ಅಮೆರಿಕ-ಚೀನಾ ವ್ಯಾಪಾರ ಸಂಘರ್ಷ ತೀವ್ರ; ಚಿನ್ನದ ಬೆಲೆ ದಿಢೀರ್​ ಏರಿಕೆ: ಹೊಸ ದಾಖಲೆ ಬರೆದ Gold ರೇಟ್​!

dk - 2025-04-11T210843.909
Published on

ನವದೆಹಲಿ: ಸ್ಥಳೀಯ ಆಭರಣ(Gold) ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಭಾರೀ ಬೇಡಿಕೆಯಿಂದಾಗಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 6,250 ರೂ. ಗಳಷ್ಟು ಏರಿಕೆಯಾಗುವ ಮೂಲಕ 10 ಗ್ರಾಂಗೆ 96,450 ರೂ.ಗೆ ತಲುಪಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ''ಅಮೇರಿಕಾ-ಚೀನಾ ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶುದ್ಧವಾದ ಚಿನ್ನದ ಬೇಡಿಕೆಯ ಹೆಚ್ಚುತ್ತಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದ್ದು, ದೇಶೀಯ ಬೆಲೆಗಳನ್ನು ಹೆಚ್ಚಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.''

ಬುಧವಾರ(ಏ.09) ದಂದು ಶೇ.99.9 ಶುದ್ಧತೆಯ ಗೋಲ್ಡ್ ಪ್ರತಿ 10 ಗ್ರಾಂಗೆ 90,200 ರೂ. ಇತ್ತು. ನಾಲ್ಕು ದಿನಗಳ ತೀವ್ರ ಕುಸಿತದ ನಂತರ ಚೇತರಿಸಿಕೊಂಡಿದ್ದು, 99.5 ಪ್ರತಿಶತ ಶುದ್ಧತೆಯ ಚಿನ್ನವು ರೂ 6,250 ರಷ್ಟು ಏರಿಕೆಯಾಗಿ 10 ಗ್ರಾಂಗೆ 96,000 ರೂ.ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರತಿ 10 ಗ್ರಾಂಗೆ 89,750 ರೂ. ಹಿಂದಿನ ಬೆಲೆ ಇತ್ತು.

ಬೆಳ್ಳಿಯ ಬೆಲೆಗಳು ಸಹ ಪ್ರತಿ ಕೆಜಿಗೆ ರೂ 2,300 ರಿಂದ ರೂ 95,500 ರಷ್ಟು ಏರಿಕೆಯನ್ನು ದಾಖಲಿಸಿದೆ. ಹಿಂದಿನ ಮಾರುಕಟ್ಟೆಯ ಬೆಳ್ಳಿ ಪ್ರತಿ ಕೆಜಿಗೆ 93,200 ರೂ. ಇತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net