More

    ಭಾರತ-ಪಾಕಿಸ್ತಾನ ಕ್ರಿಕೆಟ್; ಪಂದ್ಯ ನೋಡಲು ಬಂದು 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದುಕೊಂಡ ನಟಿ

    ಅಹಮದಾಬಾದ್​​: ಭಾರತ ಮತ್ತು ಪಾಕ್​​​ ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್​​ ನಟಿ ಊರ್ವಶಿ ರೌಟೇಲಾ ಅವರು ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮನಿಸಿದ್ದರು. ಈ ವೇಳೆ ನಟಿ ದುಬಾರಿ ಬೆಲೆ ಬಾಳುವ ಮೊಬೈಲ್​​ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

    urvashi

    ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದರು. ಈ ವೇಳೆ ಚಿನ್ನದಿಂದ ಮಾಡಲಾದ ಐ ಫೋನ್​ ಕಳೆದುಕೊಂಡಿದ್ದಾರೆ. ಈ ಕುರಿತಾಗಿ ನಟಿ ಟ್ವೀಟ್​​ ಮಾಡಿದ್ದಾರೆ.

    ಭಾರತ-ಪಾಕಿಸ್ತಾನ ಕ್ರಿಕೆಟ್; ಪಂದ್ಯ ನೋಡಲು ಬಂದು 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದುಕೊಂಡ ನಟಿ

    ನನ್ನ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದು ಹೋಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕಿದ್ದರೆ, ದಯವಿಟ್ಟು ತಂದು ಕೊಡಿ, ಮೊಬೈಲ್​ ನಿಮಗೆ ಸಿಕ್ಕಿದ್ದರೆ ನನ್ನ ಸಂಪರ್ಕಿಸಿ ಎಂದು ಮನವಿ ಮಾಡಿ ಟ್ವೀಟ್​​ ಮಾಡಿದ್ದಾರೆ. ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ.

    ಊರ್ವಶಿ ರೌಟೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಇದೊಂದು ಪ್ರಚಾರ ಪಡೆಯುವ ತಂತ್ರ ಎಂದು ಕೆಲವರು ಆರೋಪ ಮಾಡಿದ್ದಾರೆ. ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ನಟಿಗೆ ಪ್ರಶ್ನೆ ಮಾಡಿದ್ದಾರೆ.

    ಭಾರತ-ಪಾಕಿಸ್ತಾನ ಕ್ರಿಕೆಟ್; ಪಂದ್ಯ ನೋಡಲು ಬಂದು 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದುಕೊಂಡ ನಟಿ

    ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಗೃಹ ಮಂತ್ರಿ ಅಮಿತ್ ಶಾ ಅವರಿಂದ ಹಿಡಿದು ಹಲವು ಬಾಲಿವುಡ್ ತಾರೆಯರು, ಸ್ಯಾಂಡಲ್​ವುಡ್ ತಾರೆ ರಮ್ಯಾ ಸೇರಿದಂತೆ ಇನ್ನೂ ಹಲವರು ಭಾರತ-ಪಾಕಿಸ್ತಾನ ಪಂದ್ಯವನ್ನು ಕಣ್​ ತುಂಬಿಕೊಂಡರು.

    ಹುಡುಕಿದ್ರೂ ಸಿಗ್ತಿಲ್ಲ ನಟ ಪ್ರಭಾಸ್​ ಇನ್​ಸ್ಟಾಗ್ರಾಂ ಖಾತೆ!; ಇದು ಹ್ಯಾಕರ್​ಗಳ ಕೈಚಳಕವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts